ಚಿಕ್ಕಮಕ್ಕಳಿಗೆ ಊಟ ಮಾಡಿಸುವುದು ನಿಜವಾಗಿಯೂ ಸವಾಲಿನ ಕೆಲಸ. ಮೊಬೈಲ್ ಅಥವಾ ಟಿವಿ ನೋಡುತ್ತಾ ಮಕ್ಕಳು ಮೈಮರೆತು ಕುಳಿತು ಊಟ ಮಾಡುತ್ತಾರೆ ಎಂಬುದೇನೋ ನಿಜ, ಆದರೆ ಅದನ್ನೇ ಅಭ್ಯಾಸ ಮಾಡಿಕೊಳ್ಳದಿರಿ.
ಅದರ ಹೊರತಾಗಿ ಊಟದ ತಟ್ಟೆಯನ್ನು ಆಕರ್ಷಕವಾಗಿ ಅಲಂಕಾರ ಮಾಡಿ. ಮಕ್ಕಳಿಗೆ ನೋಡಿದಾಕ್ಷಣ ಊಟ ಇಷ್ಟವಾಗುವಂತಿರಲಿ. ದಿನಕ್ಕೊಂದು ಬಣ್ಣದ ಅಂದರೆ ಒಂದು ದಿನ ಬೀಟ್ ರೂಟ್, ಕ್ಯಾರೆಟ್, ಹಸಿರು ಸೊಪ್ಪು ಮೊದಲಾದವುಗಳನ್ನು ಬಳಸಿ ಊಟ ಅಥವಾ ಪಲ್ಯ ತಯಾರಿಸಿ.
ಕತೆ ಹೇಳುತ್ತಾ ಊಟ ಮಾಡುವುದು ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೊಂದು ಕತೆ ಹೇಳುವ ಮೂಲಕ ಮಕ್ಕಳನ್ನು ಅಷ್ಟು ಹೊತ್ತು ಕೂರಿಸಲು ಪ್ರಯತ್ನಿಸಿ.
ಮಕ್ಕಳು ಇಷ್ಟಪಡುವ ತಿಂಡಿಯನ್ನೇ ಕೊಡಿ. ದೋಸೆ ಅಥವಾ ಇಡ್ಲಿ ಮಾಡಿ. ರೈಸ್ ಐಟಮ್ ಇಷ್ಟವಿದ್ದರೆ ಪಲಾವ್, ಫ್ರೈಡ್ ರಸ್ ವಿಧವಿಧದಲ್ಲಿ ತಯಾರಿಸಿ. ಮಿನಿ ದೋಸೆ, ಮಿನಿ ಇಡ್ಲಿಗಳನ್ನು ಮಕ್ಕಳು ಇಷ್ಟಪಟ್ಟು ಸವಿಯುತ್ತಾರೆ.