
ಈಗ ಮಾವಿನ ಹಣ್ಣಿನ ಸೀಸನ್ ಶುರುವಾಗಿದೆ. ಸಾಮಾನ್ಯವಾಗಿ ಸಿಹಿಯಾದ ಮಾವು ತಿಂದು ಅದರ ಒರಟೆಯನ್ನು ನಾವು ಎಸೆದುಬಿಡುತ್ತೇವೆ. ಆದ್ರೆ ಇನ್ಮೇಲೆ ಮಾವಿನ ಒರಟೆಗಳನ್ನು ವೇಸ್ಟ್ ಮಾಡಬೇಡಿ. ಯಾಕಂದ್ರೆ ಈ ಒರಟೆಗಳು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತವೆ.
ಮಾವಿನ ಒರಟೆಯನ್ನು ಸೇವನೆ ಮಾಡುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ. ಸಕ್ಕರೆ ಕಾಯಿಲೆ ಇರುವವರು ಮಾವಿನ ಒರಟೆಯನ್ನು ಸೇವನೆ ಮಾಡಬೇಕು. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಮುಟ್ಟಿನ ನೋವನ್ನು ಕಡಿಮೆ ಮಾಡಲು ನೀವು ಮಾವಿನ ಒರಟೆಯನ್ನು ಸೇವಿಸಬಹುದು. ಮಹಿಳೆಯರಲ್ಲಿರೋ ಇತರ ಮುಟ್ಟಿನ ಸಮಸ್ಯೆಗಳು ಕೂಡ ಇದರಿಂದ ಪರಿಹಾರವಾಗುತ್ತವೆ. ಹೃದಯದ ಆರೋಗ್ಯಕ್ಕೆ ಕೂಡ ಮಾವಿನ ಒರಟೆಯ ಸೇವನೆ ಅತ್ಯವಶ್ಯಕ. ಹೃದಯವನ್ನು ಸದೃಢವಾಗಿಡಲು ಇದು ಸಹಾಯ ಮಾಡುತ್ತದೆ. ಹೃದ್ರೋಗಿಗಳು ಮಾವಿನ ಒರಟೆ ತಿನ್ನುವುದು ಸೂಕ್ತ.
ಮಾವಿನ ಒರಟೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಸಹಜವಾಗಿಯೇ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಇದು ಹಲ್ಲುಗಳಿಗೂ ತುಂಬಾ ಪ್ರಯೋಜನಕಾರಿ. ಮಾವಿನ ಒರಟೆಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಕ್ಯಾಲ್ಸಿಯಂ ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.