ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕೆಂಪು ಸೇಬನ್ನು ತಿನ್ನುವುದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ ಸೇಬು ಹಣ್ಣನ್ನು ತಿನ್ನುವ ಸಂದರ್ಭದಲ್ಲಿ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. ಸೇಬು ಹಣ್ಣಿನ ಜೊತೆಗೆ ಅಥವಾ ಸೇಬು ತಿಂದ ಬಳಿಕ ಕೆಲವೊಂದು ಪದಾರ್ಥಗಳನ್ನು ತಿನ್ನಬಾರದು, ಅದು ವಿಷವಾಗುತ್ತದೆ.
ಸೇಬಿನಲ್ಲಿ ಎಂಟಿಒಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಅಷ್ಟೇ ಅಲ್ಲ ಕಬ್ಬಿಣಾಂಶ, ಪೊಟ್ಯಾಶಿಯಂ, ಮೆಗ್ನೀಷಿಯಂ, ನಾರಿನಂಶ ಮತ್ತು ಹಲವಾರು ಪೋಷಕಾಂಶಗಳಿವೆ. ಸೇಬು ತಿಂದ ನಂತರ ಮೊಸರು ತಿನ್ನಬಾರದು. ಅದು ಕೆಮ್ಮಿನ ಸಮಸ್ಯೆಗೆ ಕಾರಣವಾಗಬಹುದು. ಶ್ವಾಸಕೋಶದಲ್ಲಿ ಸೋಂಕು ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ.
ಸೇಬು ತಿಂದ ನಂತರ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ. ಇದು ಹೊಟ್ಟೆಯಲ್ಲಿ ಅಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ ಒತ್ತಡ ಕೂಡ ಹೆಚ್ಚಾಗಲು ಪ್ರಾರಂಭಿಸುತ್ತದೆ. ಆಪಲ್ ತಿಂದ ನಂತರ ಮೂಲಂಗಿಯನ್ನು ಕೂಡ ಸೇವಿಸಬಾರದು. ಅದು ಶೀತ ಸ್ವಭಾವವನ್ನು ಹೊಂದಿದ್ದು, ಕೆಮ್ಮಿನ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಸೇಬು ಹಣ್ಣನ್ನು ತಿಂದ ನಂತರ ಉಪ್ಪಿನಕಾಯಿಯನ್ನು ಕೂಡ ಸೇವಿಸಬಾರದು. ಉಪ್ಪಿನಕಾಯಿ ತಿಂದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ.