alex Certify ಕಡಲೆಕಾಯಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಕುಡಿಯಬೇಡಿ ನೀರು; ಆಯುರ್ವೇದದಲ್ಲಿದೆ ಇದಕ್ಕೆ ಕಾರಣ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲೆಕಾಯಿ ತಿಂದ ತಕ್ಷಣ ಅಪ್ಪಿತಪ್ಪಿಯೂ ಕುಡಿಯಬೇಡಿ ನೀರು; ಆಯುರ್ವೇದದಲ್ಲಿದೆ ಇದಕ್ಕೆ ಕಾರಣ…..!

ಕಡಲೆಕಾಯಿ ಅಥವಾ ಶೇಂಗಾವನ್ನು ಬಡವರ ಬಾದಾಮಿ ಎಂದೇ ಕರೆಯಲಾಗುತ್ತದೆ. ಇದು ಅತ್ಯಂತ ಪೌಷ್ಟಿಕ ಮತ್ತು ರುಚಿಕರವಾದ ಆಹಾರ.  ಕಡಲೆಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ಸ್‌ ಹೇರಳವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ಕಡಲೆಕಾಯಿ ತಿಂದ ನಂತರ ಅಪ್ಪಿತಪ್ಪಿಯೂ ನೀರು ಕುಡಿಯಬಾರದು. ಆಯುರ್ವೇದದ ಪ್ರಕಾರ ಕಡಲೆಕಾಯಿ ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

ಆಯುರ್ವೇದದ ಪ್ರಕಾರ ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ವಾತ, ಪಿತ್ತ ಮತ್ತು ಕಫವೆಂಬ ಮೂರು ದೋಷಗಳಿರುತ್ತವೆ. ಇವುಗಳ ಸಮತೋಲನವನ್ನು ಹೊಂದಿರುವುದು ಅವಶ್ಯಕ. ಇವುಗಳಲ್ಲಿ ಯಾವುದಾದರೂ ಅಸಮತೋಲನವಾದಲ್ಲಿ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.

ಕಡಲೆಕಾಯಿ ಉಷ್ಣ ಮತ್ತು ಭಾರವಾದ ಆಹಾರ. ಇದನ್ನು ಜೀರ್ಣಿಸಿಕೊಳ್ಳಲು ದೇಹವು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಕಡಲೆಕಾಯಿಯನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಅಡ್ಡಿಯುಂಟಾಗುತ್ತದೆ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಕಡಲೆಕಾಯಿ ತಿಂದ ನಂತರ ನೀರು ಕುಡಿದರೆ ಏನಾಗುತ್ತದೆ?

ಜೀರ್ಣಕ್ರಿಯೆಯ ಮೇಲೆ ಪರಿಣಾಮ

ಶೇಂಗಾವನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ. ಇದನ್ನು ತಿಂದಾಗ ಜೀರ್ಣಕಾರಿ ರಸಗಳು ನಮ್ಮ ದೇಹದಲ್ಲಿ ಕ್ರಿಯಾಶೀಲವಾಗುತ್ತವೆ. ಈ ಅವಧಿಯಲ್ಲಿ ನೀರು ಕುಡಿದರೆ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ ಇದರಿಂದ ಗ್ಯಾಸ್, ಅಜೀರ್ಣ, ಹೊಟ್ಟೆ ಭಾರದಂತಹ ಸಮಸ್ಯೆಗಳು ಉಂಟಾಗುತ್ತವೆ.

ಅಸಿಡಿಟಿ ಮತ್ತು ಹೊಟ್ಟೆಯಲ್ಲಿ ಕಿರಿಕಿರಿ

ಕಡಲೆಕಾಯಿ ಎಣ್ಣೆಯುಕ್ತ ಮತ್ತು ಉಷ್ಣ ಸ್ವಭಾವವನ್ನು ಹೊಂದಿದೆ. ಅವುಗಳನ್ನು ತಿಂದಾಹ ಹೊಟ್ಟೆಯಲ್ಲಿ ಶಾಖ ಉತ್ಪತ್ತಿಯಾಗುತ್ತದೆ. ಇದಾದ ತಕ್ಷಣ ನೀರು ಕುಡಿದರೆ ಅದು ಹೊಟ್ಟೆಯಲ್ಲಿನ ಶಾಖವನ್ನು ಹಠಾತ್ತನೆ ತಣ್ಣಗಾಗಿಸುತ್ತದೆ, ಇದರಿಂದ ಹೊಟ್ಟೆಯಲ್ಲಿ ಅಸಿಡಿಟಿ ಅಥವಾ ಉರಿ ಮುಂತಾದ ಸಮಸ್ಯೆಗಳಾಗುತ್ತವೆ.

ಗಂಟಲು ಮತ್ತು ಎದೆಯ ಬಿಗಿತ

ಕಡಲೆಕಾಯಿ ತಿಂದ ತಕ್ಷಣವೇ ತಣ್ಣೀರು ಕುಡಿದರೆ ಗಂಟಲು ಮತ್ತು ಎದೆಯಲ್ಲಿ ಕಫದ ಶೇಖರಣೆಗೆ ಕಾರಣವಾಗಬಹುದು. ಇದು ಕೆಮ್ಮು, ಗಂಟಲು ನೋವು ಮತ್ತು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು.

ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ

ಕಡಲೆಕಾಯಿಯನ್ನು ತಿಂದ ನಂತರ ನೀರು ಕುಡಿಯುವುದರಿಂದ ಚಯಾಪಚಯ ಪ್ರಕ್ರಿಯೆ ನಿಧಾನಗೊಳಿಸುತ್ತದೆ. ಇದರಿಂದ ತೂಕ ಹೆಚ್ಚಾಗುವುದರ ಜೊತೆಗೆ ಜೀರ್ಣಕಾರಿ ಸಮಸ್ಯೆಗಳಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...