alex Certify ಈ ಹಣ್ಣುಗಳನ್ನು ತಿಂದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಣ್ಣುಗಳನ್ನು ತಿಂದ ತಕ್ಷಣ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ !

ಹಣ್ಣುಗಳು ಆರೋಗ್ಯದ ನಿಧಿ. ಜೀವಸತ್ವ, ಖನಿಜ, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ. ಆದಾಗ್ಯೂ ಹಣ್ಣುಗಳನ್ನು ತಿನ್ನಲು ಕೆಲವು ನಿಯಮಗಳಿವೆ. ಕೆಲವು ಪದಾರ್ಥಗಳೊಂದಿಗೆ ಹಣ್ಣುಗಳನ್ನು ಸೇವಿಸುವುದು ಹಾನಿಕಾರಕ. ಅನೇಕ ಜನರು ಆಹಾರದ ಜೊತೆಗೆ ಹಣ್ಣುಗಳನ್ನು ತಿನ್ನುತ್ತಾರೆ.

ಹಗಲು-ಮಧ್ಯಾಹ್ನ ಅಥವಾ ರಾತ್ರಿ ಯಾವುದೇ ಸಮಯದಲ್ಲಾದರೂ ತಿನ್ನುತ್ತಾರೆ, ಅದು ಸರಿಯಲ್ಲ. ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯುವುದು ಕೂಡ ಅಪಾಯಕಾರಿ. ಇದು ಆರೋಗ್ಯಕ್ಕೆ ಸಮಸ್ಯೆ ತಂದೊಡ್ಡಬಹುದು. ಕೆಲವು ನಿರ್ದಿಷ್ಟ ಹಣ್ಣುಗಳನ್ನು ತಿಂದ ನಂತರ ನೀರು ಕುಡಿದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಾಗುತ್ತವೆ.

ಬಾಳೆಹಣ್ಣುಶಕ್ತಿಯ ಪ್ರಬಲ ಮೂಲ ಬಾಳೆಹಣ್ಣು. ಇದು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಮಲಬದ್ಧತೆ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲು ಬಾಳೆಹಣ್ಣು ಪ್ರಯೋಜನಕಾರಿ. ಆದರೆ ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ.

ಸೀಬೆಹಣ್ಣುಫೈಬರ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಜೊತೆಗೆ ಫೋಲಿಕ್ ಆಮ್ಲ, ಪೊಟ್ಯಾಸಿಯಮ್ ಹಾಗೂ ತಾಮ್ರ ಪೇರಲ ಹಣ್ಣಿನಲ್ಲಿ ಹೇರಳವಾಗಿದೆ. ಪೇರಲವನ್ನು ತಿನ್ನುವುದು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆದರೆ ಸೀಬೆಹಣ್ಣು ತಿಂದ ನಂತರ ನೀರು ಕುಡಿಯುವುದು ಅಪಾಯಕಾರಿ. ಇದು ಜೀರ್ಣಕ್ರಿಯೆಯನ್ನು ಕೆಡಿಸಬಹುದು.

ದಾಳಿಂಬೆದಾಳಿಂಬೆಯ ಕೆಂಪು ಬೀಜಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದನ್ನು ತಿಂದ ನಂತರ ಅಪ್ಪಿತಪ್ಪಿಯೂ ನೀರು ಕುಡಿಯಬಾರದು. ದಾಳಿಂಬೆ ತಿಂದ ನಂತರ ನೀರು ಕುಡಿದರೆ ವಾಕರಿಕೆ, ಅಸಿಡಿಟಿ, ವಾಂತಿ ಆಗುವ ಸಾಧ್ಯತೆ ಇರುತ್ತದೆ.

ಸಿಟ್ರಸ್ ಹಣ್ಣುಗಳು ಕಿತ್ತಳೆ, ನೆಲ್ಲಿಕಾಯಿ, ದ್ರಾಕ್ಷಿಯಂತಹ ಹುಳಿ ಹಣ್ಣುಗಳನ್ನು ತಿಂದ ನಂತರವೂ ನೀರನ್ನು ಕುಡಿಯಬಾರದು. ಹೀಗೆ ಮಾಡುವುದರಿಂದ ದೇಹದ ಪಿಎಚ್ ಮಟ್ಟಕ್ಕೆ ತೊಂದರೆಯಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ.

ಕಲ್ಲಂಗಡಿದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸಲು ಕಲ್ಲಂಗಡಿ ತುಂಬಾ ಪ್ರಯೋಜನಕಾರಿಯಾಗಿದೆ. ಆರೋಗ್ಯ ತಜ್ಞರ ಪ್ರಕಾರ ಕಲ್ಲಂಗಡಿ ನೀರಿನಿಂದಲೇ ಆವರಿಸಿಕೊಂಡಿರುವ ಹಣ್ಣು. ಆದರೆ ಅದನ್ನು ತಿಂದ ನಂತರ ನೀರು ಕುಡಿದರೆ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ. ಇದು ಬೇಧಿ ಅಥವಾ ಲೂಸ್‌ ಮೋಷನ್‌ಗೂ ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...