alex Certify ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಬೇಡಿ; ಆರೋಗ್ಯಕ್ಕಿದು ಅಪಾಯಕಾರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿಯಬೇಡಿ; ಆರೋಗ್ಯಕ್ಕಿದು ಅಪಾಯಕಾರಿ…..!

ಜ್ಯೂಸ್‌ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಹಾಗಂತ ಯಾವ ಸಮಯದಲ್ಲಿ ಯಾವ ಜ್ಯೂಸ್‌ ಸೇವನೆ ಮಾಡುವುದು ಸೂಕ್ತ ಅನ್ನೋದನ್ನು ತಿಳಿದುಕೊಳ್ಳದೇ ಇದ್ದರೆ ಹಣ್ಣಿನ ರಸವೇ ನಿಮ್ಮ ದೇಹಕ್ಕೆ ಮಾರಕವಾಗಬಹುದು.

ಅದರಲ್ಲೂ ತಣ್ಣನೆಯ ಜ್ಯೂಸ್‌ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗಬಹುದು. ಈ ಜ್ಯೂಸ್‌ ನಿಮ್ಮ ಲೋಳೆಯ ಪೊರೆಗಳಿಗೆ ತೊಂದರೆ ಮಾಡುತ್ತದೆ.

ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಜ್ಯೂಸ್ ಕುಡಿಯುವ ಅಭ್ಯಾಸವಿದ್ದರೆ ಅದನ್ನು ಬದಲಾಯಿಸಿಕೊಳ್ಳಿ. ಸ್ವಲ್ಪ ಆಹಾರ ಸೇವಿಸಿದ ನಂತರ ನೀವು ಹಣ್ಣಿನ ರಸವನ್ನು ಕುಡಿಯಬಹುದು. ಆಗ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ರೀತಿ ಮಾಡಿದ್ರೆ ಜ್ಯೂಸ್‌ ನಿಮ್ಮ ದೇಹಕ್ಕೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್‌ ಬದಲು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ಹೊಟ್ಟೆ ಸ್ವಚ್ಛವಾಗುತ್ತದೆ. ಅದರಲ್ಲೂ ಸಿಟ್ರಸ್‌ ಅಂಶವಿರುವ ಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆ ಅಥವಾ ಇತರೆ ಸೀಸನಲ್ ಹಣ್ಣುಗಳ ಜ್ಯೂಸ್‌ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಾರದು. ಈ ಹಣ್ಣಿನ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಮ್ಲೀಯತೆ ಹೆಚ್ಚಾಗುತ್ತದೆ. ಯಾಕೆಂದರೆ ಈ ಹಣ್ಣುಗಳು ಸಿಟ್ರಸ್ ಅಂಶವನ್ನು ಹೊಂದಿರುತ್ತವೆ.

ತಾಜಾ ಹಣ್ಣಿನ ರಸವನ್ನು ಕುಡಿಯುವುದು ದೇಹವನ್ನು ಆರೋಗ್ಯಕರವಾಗಿಡಲು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇದು ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ. ಇದರಿಂದ ಆಸಿಡಿಟಿ, ಮಲಬದ್ಧತೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಜ್ಯೂಸ್‌ನಲ್ಲಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳಂತಹ ಪೋಷಕಾಂಶಗಳಿವೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್‌ ಕುಡಿಯುವ ಅಭ್ಯಾಸ ಮಾಡಿಕೊಂಡುಬಿಡುತ್ತಾರೆ. ಆದ್ರೆ ಸ್ವಲ್ಪ ಆಹಾರ ಸೇವನೆ ಮಾಡಿದ ಬಳಿಕವೇ ಜ್ಯೂಸ್‌ ಕುಡಿದರೆ ಅದರ ಪ್ರಯೋಜನ ದುಪ್ಪಟ್ಟಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...