ಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿ. ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯಾಘಾತದಿಂದ ಪಾರ್ಶ್ವವಾಯುವರೆಗೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ರಾತ್ರಿಯಲ್ಲಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಬೇಕೇ…? ಬೇಡ್ವೆ….? ಎಂಬ ಪ್ರಶ್ನೆ ಅನೇಕರಿಗೆ ಕಾಡುತ್ತದೆ. ತಜ್ಞರ ಪ್ರಕಾರ ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಸೇವನೆ ಮಾಡಬಾರದು.
ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಕುಡಿಯುತ್ತಿದ್ದರೆ ಈಗ್ಲೇ ಅಭ್ಯಾಸ ಬಿಡಿ. 95 ಮಿಗ್ರಾಂ ಗ್ರೀನ್ ಟೀ ಒಂದು ಕಪ್ ಟೀಗಿಂತ ಮೂರು ಪಟ್ಟು ಹೆಚ್ಚು ಕೆಫೀನ್ ಹೊಂದಿರುತ್ತದೆ. ಮಲಗುವ ಮೊದಲು ಇದನ್ನು ಸೇವಿಸಿದ್ರೆ ನಿದ್ರೆ ಕಡಿಮೆಯಾಗುತ್ತದೆ.
ರಾತ್ರಿ ಗ್ರೀನ್ ಟೀ ಸೇವನೆ ಕೆಟ್ಟ ಅಭ್ಯಾಸ. ಮರೆತೂ ರಾತ್ರಿ ಮಲಗುವ ಮೊದಲು ಗ್ರೀನ್ ಟೀ ಕುಡಿಯಬೇಡಿ. ದಿನದಲ್ಲಿ ಎರಡು ಬಾರಿ ಗ್ರೀನ್ ಟೀ ಕುಡಿಯಬಹುದು. ಆದ್ರೆ ರಾತ್ರಿ ಟೀ ಬೇಡ. ಮೂತ್ರಪಿಂಡದಲ್ಲಿ ಕಲ್ಲಿರುವವರು ದಿನದಲ್ಲಿ ಎರಡು ಬಾರಿ ಗ್ರೀನ್ ಟೀ ಸೇವಿಸಬೇಕು. ಗ್ರೀನ್ ಟೀ ಕ್ಯಾನ್ಸರ್ ನಿಂದ ಹೃದಯದವರೆಗಿನ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.