ಬೆಳಿಗ್ಗೆ ಎದ್ದ ತಕ್ಷಣ ಅನೇಕರು ಟೀ ಕುಡಿಯುತ್ತಾರೆ. ಟೀ ಇಲ್ಲದೆ ದಿನ ಆರಂಭವಾಗುವುದಿಲ್ಲ ಎನ್ನುವವರಿದ್ದಾರೆ. ಕೆಲವರು ಚಹಾದೊಂದಿಗೆ ಬಿಸ್ಕತ್ತು, ಮಸಾಲೆಯುಕ್ತ ಆಹಾರವನ್ನು ಇಷ್ಟಪಡುತ್ತಾರೆ. ಆದರೆ ಚಹಾದೊಂದಿಗೆ ಕೆಲ ಆಹಾರ ಸೇವಿಸುವುದರಿಂದ ಅನಾರೋಗ್ಯ ಉಂಟಾಗುತ್ತದೆ.
ಚಹಾದೊಂದಿಗೆ ಅವುಗಳನ್ನು ಸೇವಿಸುವುದರಿಂದ ಹೊಟ್ಟೆ ಸಮಸ್ಯೆ ಕಾಡುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಆಗಬಹುದು.
ಟೀ ಜೊತೆ ಕಡಲೆ ಹಿಟ್ಟಿನಿಂದ ಮಾಡಿದ ಪದಾರ್ಥ ಸೇವನೆ ಮಾಡಲು ಅನೇಕರು ಇಷ್ಟಪಡ್ತಾರೆ. ಇದು ದೇಹದಲ್ಲಿನ ಪೋಷಕಾಂಶಗಳು ಕಡಿಮೆಯಾಗುತ್ತವೆ. ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ.
ಟೀ ಜೊತೆ ಹಸಿ ಆಹಾರ ಸೇವನೆ ಮಾಡಬಾರದು. ಅಂದ್ರೆ ಟೀ ಜೊತೆ ಸಲಾಡ್, ಮೊಳಕೆಯೊಡೆದ ಧಾನ್ಯಗಳು ಅಥವಾ ಬೇಯಿಸಿದ ಮೊಟ್ಟೆಗಳನ್ನು ತಿನ್ನಬಾರದು.
ಟೀ ಜೊತೆ ತಣ್ಣನೆಯ ಆಹಾರ ಸೇವನೆ ಮಾಡಬೇಡಿ. ಟೀ ಕುಡಿದ ಕೂಡಲೇ ನೀರು ಕುಡಿಯಬಾರದು. ಇದು ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಟೀ ಕುಡಿಯುವ ಮೊದಲು ನೀರು ಕುಡಿಯಬಹುದು.
ಟೀ ಜೊತೆ ಹುಳಿ ಪದಾರ್ಥ ಸೇವೆಯನ್ನು ಕಡಿಮೆ ಮಾಡಿ. ಅನೇಕರು ನಿಂಬೆ ಟೀ ಕುಡಿಯುತ್ತಾರೆ. ನಿಂಬೆ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಬಾರದು. ಇದು ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಿಸುತ್ತದೆ.
ಟೀ ಕುಡಿದ ತಕ್ಷಣ ಯಾವುದೇ ಕಾರಣಕ್ಕೂ ಅರಿಶಿನ ಸೇವನೆ ಮಾಡಬೇಡಿ. ಎರಡರಲ್ಲಿರುವ ರಾಸಾಯನಿಕ ಅಂಶ ಹೊಟ್ಟೆ ಕೆಡಲು ಕಾರಣವಾಗುತ್ತದೆ.