ಗುರುವಾರ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣುವಿನ ಪೂಜೆ ಜೊತೆ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಗುರುವಾರ ದಾನ ಮಾಡಿದ್ರೆ ಸಂತೋಷ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಹಳದಿ ಬಟ್ಟೆಯನ್ನು ಧರಿಸಿ ವಿಷ್ಣುವಿನ ಪೂಜೆ ಮಾಡಬೇಕು. ಹಳದಿ ವಸ್ತುಗಳನ್ನು ದಾನ ಮಾಡುವುದ್ರಿಂದ ಮನಸ್ಸಿನಲ್ಲಿ ಶಾಂತಿ, ಸಂತೋಷ ನೆಲೆಸುತ್ತದೆ.
ಗುರುವಾರ ದಾನ ಮಾಡಬೇಕು ನಿಜ. ಆದ್ರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದು ಅಸಂತೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಗುರುವಾರ ಕಪ್ಪು ಬಣ್ಣದ ವಸ್ತು, ಬಟ್ಟೆಗಳನ್ನು ದಾನ ಮಾಡಬಾರದು. ಇದ್ರಿಂದ ವಿಷ್ಣುವಿನ ಆರಾಧನೆ ಫಲಪ್ರದವಾಗುವುದಿಲ್ಲ. ಯಾವುದೇ ಇಚ್ಛೆ ಈಡೇರುವುದಿಲ್ಲ.
ವಿವಾಹದಲ್ಲಿ ಅಡತಡೆಯುಂಟಾಗುತ್ತಿದ್ದರೆ ಗುರುವಾರದ ದಿನ ಅರಿಶಿನವನ್ನು ದಾನ ಮಾಡಬೇಕು. ಇದ್ರಿಂದ ಮದುವೆ ಸಮಸ್ಯೆ ದೂರವಾಗುತ್ತದೆ. ಹಳದಿ ಬಣ್ಣದ ಆಹಾರ ದಾನ ಮಾಡುವುದ್ರಿಂದ ಅದೃಷ್ಟ ಒಲಿಯುತ್ತದೆ. ಉದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ.
ಗುರುವಾರ ವಿಷ್ಣು ದೇವಾಲಯದಲ್ಲಿ ಮಾವಿನಹಣ್ಣನ್ನು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಪ್ರಾಪ್ತಿಯಾಗುತ್ತದೆ.