ಆಹಾರ ಸೇವನೆಯಿಂದ ಪೋಷಕಾಂಶ ನಮ್ಮ ದೇಹ ಸೇರುತ್ತದೆ. ಆಹಾರ ಶಕ್ತಿಯನ್ನು ನೀಡುತ್ತದೆ. ನಾವು ಸೇವಿಸಿದ ಆಹಾರದ ಸಂಪೂರ್ಣ ಪೋಷಕಾಂಶ ನಮ್ಮ ದೇಹ ಸೇರಬೇಕೆಂದ್ರೆ ಊಟವಾದ ನಂತ್ರ ನಾವು ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಸಾಮಾನ್ಯವಾಗಿ ಊಟವಾದ ತಕ್ಷಣ ಅನೇಕರು ನೀರನ್ನು ಕುಡಿಯುತ್ತಾರೆ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಕಿಣ್ವದ ಮೇಲೆ ಪರಿಣಾಮ ಬೀರುತ್ತದೆ. ಊಟವಾದ ಒಂದು ಗಂಟೆ ನಂತ್ರ ನೀರು ಸೇವನೆ ಮಾಡಬೇಕು. ಅಗತ್ಯವೆನಿಸಿದ್ರೆ ಊಟದ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಸೇವನೆ ಮಾಡಬಹುದು.
ಆಹಾರ ಸೇವನೆ ಮಾಡಿದ ತಕ್ಷಣ ಟೀ, ಕಾಫಿ, ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡಬಾರದು. ಆಹಾರ ಸೇವನೆ ಮಾಡಿದ ಒಂದು ಗಂಟೆ ನಂತ್ರ ಅಥವಾ ಒಂದು ಗಂಟೆ ಮೊದಲು ಇದನ್ನು ಸೇವನೆ ಮಾಡಬೇಕು. ತಕ್ಷಣ ಸೇವನೆ ಮಾಡಿದ್ರೆ ದೇಹಕ್ಕೆ ಕಬ್ಬಿಣದಾಂಶದ ಕೊರತೆಯಾಗುತ್ತದೆ. ರಕ್ತ ಹೀನತೆ ಕಾಡುತ್ತದೆ.
ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಧೂಮಪಾನ ಮಾಡುತ್ತಾರೆ. ಇದು ಆರೋಗ್ಯಕ್ಕೆ ತುಂಬ ಹಾನಿಕಾರಕ. ಆಹಾರ ಸೇವನೆ ಮಾಡಿದ ತಕ್ಷಣ ಸಿಗರೇಟ್ ತೆಗೆದುಕೊಳ್ಳುವುದು 10 ಸಿಗರೇಟ್ ಸೇದಿದಂತೆ.
ಇನ್ನು ಕೆಲವರು ಆಹಾರ ಸೇವನೆ ಮಾಡಿದ ತಕ್ಷಣ ಸ್ನಾನ ಮಾಡುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಆಹಾರ ಸೇವನೆ ಮಾಡಿದ ತಕ್ಷಣ ಸ್ನಾನ ಮಾಡಿದ್ರೆ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ರಕ್ತ ಪರಿಚಲನೆ ಮೇಲೆ ಇದು ಪರಿಣಾಮ ಬೀರುತ್ತದೆ.