ವ್ಯಾಯಾಮ ಎನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದು ನಿಮ್ಮ ದಿನಚರಿ ಸರಿಯಾಗಿದ್ದಾಗ ಮಾತ್ರ. ಹೌದು….ಮಲಗೋ 3 ಗಂಟೆಗಳ ಒಳಗಾಗಿ ನಿಮ್ಮ ವ್ಯಾಯಾಮವನ್ನು ಮುಗಿಸಿರಬೇಕು. ಇಲ್ಲದೇ ಹೋದಲ್ಲಿ ಇದು ನಿಮ್ಮ ಆರೋಗ್ಯ ಹಾಗೂ ನಿದ್ದೆಯ ಮೇಲೆ ಪರಿಣಾಮ ಬೀರುತ್ತೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿತ್ತು.
ರಾತ್ರಿಯಾದ ಮೇಲೆ ವ್ಯಾಯಾಮ ಮಾಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವುದು ಕೆಲವರ ತಪ್ಪು ಕಲ್ಪನೆ. ವ್ಯಾಯಾಮದಿಂದ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಅಲ್ಲದೇ ಸ್ಟ್ರೆಸ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇಂಥ ಹಾರ್ಮೋನುಗಳು ಹಾಗೂ ಜಿಮ್ ನಲ್ಲಿರುವ ಬೆಳಕು ಮೆಲಟೋನಿನ್ ಅಂದರೆ ಸ್ಲೀಪ್ ಹಾರ್ಮೋನುಗಳ ಬಿಡುಗಡೆಯನ್ನು ತಡೆಯುತ್ತವೆ.