alex Certify ಹನುಮಾನ್ ಚಾಲೀಸಾ ಪಠಿಸುವಾಗ ಮಾಡಬೇಡಿ ಈ ತಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನುಮಾನ್ ಚಾಲೀಸಾ ಪಠಿಸುವಾಗ ಮಾಡಬೇಡಿ ಈ ತಪ್ಪು

ಭಗವಾನ್ ರಾಮನ ಮಹಾನ್ ಭಕ್ತ ಹನುಮಂತನನ್ನು ನಾವೆಲ್ಲರೂ ಭಕ್ತಿಯಿಂದ ಪೂಜಿಸುತ್ತೇವೆ. ಬಜರಂಗಬಲಿ, ಸಂಕಟಮೋಚನ, ಅಂಜನಿಪುತ್ರ ಸೇರಿದಂತೆ ಹಲವು ಹೆಸರುಗಳಿಂದ ಆಂಜನೇಯನನ್ನು ಕರೆಯಲಾಗುತ್ತದೆ. ಆಂಜನೇಯನನ್ನು ಪೂಜಿಸುವುದರಿಂದ ಜೀವನದ ಕಷ್ಟಗಳು ಕೊನೆಗೊಂಡು ಸುಖ ಶಾಂತಿ ನೆಲೆಸುತ್ತದೆ. ಹಾಗಾಗಿ ಭಜರಂಗಬಲಿಯನ್ನು ಮೆಚ್ಚಿಸಲು ನಿತ್ಯವೂ ಪೂಜೆಯನ್ನು ಮಾಡಬೇಕು. ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ಹನುಮಾನ್ ಚಾಲೀಸಾ ಪಠಣದ ನಿಯಮಗಳು

ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮಾನ್ ಚಾಲೀಸಾವನ್ನು ಸಂಪೂರ್ಣ ಭಕ್ತಿಯಿಂದ ಪಠಿಸಿದರೆ ಅವರ ಮೇಲೆ ಬಜರಂಗಬಲಿಯ ಆಶೀರ್ವಾದ ಯಾವಾಗಲೂ ಇರುತ್ತದೆ. ಹನುಮಾನ್ ಚಾಲೀಸಾವನ್ನು ಪಠಿಸುವಾಗ ತಪ್ಪುಗಳನ್ನು ಮಾಡಬಾರದು.

– ಹನುಮಾನ್ ಚಾಲೀಸಾದ ಪಠಣವನ್ನು ಪ್ರಾರಂಭಿಸುವ ಮೊದಲು  ಗಣೇಶನನ್ನು ಪೂಜಿಸಬೇಕು. ನಂತರ ರಾಮ ಮತ್ತು ಸೀತೆಗೆ ನಮಸ್ಕರಿಸಿ ಹನುಮಾನ್ ಚಾಲೀಸಾವನ್ನು ಪಠಿಸಲು ಪ್ರಾರಂಭಿಸಬೇಕು.

– ಹನುಮಾನ್ ಚಾಲೀಸಾವನ್ನು ಯಾವಾಗಲೂ ನೆಲದ ಮೇಲೆ ಕುಳಿತು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸಲು ಶುದ್ಧತೆ ಬಹಳ ಮುಖ್ಯ, ಆದ್ದರಿಂದ ಶುಚಿತ್ವದ ಬಗ್ಗೆ ಗಮನವಿರಲಿ.

– ಶಾಸ್ತ್ರಗಳ ಪ್ರಕಾರ ಹನುಮಾನ್ ಚಾಲೀಸಾವನ್ನು 100 ಬಾರಿ ಪಠಿಸಬೇಕು. ಇದನ್ನು ಹನುಮಾನ್ ಚಾಲೀಸಾದಲ್ಲಿಯೂ ಉಲ್ಲೇಖಿಸಲಾಗಿದೆ. ಹನುಮಾನ್ ಚಾಲೀಸವನ್ನು ನೂರು ಬಾರಿ ಪಠಿಸುವವನು ಬಂಧನಗಳಿಂದ ಮುಕ್ತನಾಗಿ ಸುಖವನ್ನು ಪಡೆಯುತ್ತಾನೆ ಎಂಬುದು ಇದರ ಅರ್ಥ.

– ಹನುಮಾನ್ ಚಾಲೀಸಾವನ್ನು ಪಠಿಸಿದ ನಂತರ ನೆಚ್ಚಿನ ಆಹಾರವನ್ನು ನೈವೇದ್ಯ ಮಾಡಿ.

ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಧನಾತ್ಮಕತೆ ಆವರಿಸುತ್ತದೆ. ಮೋಕ್ಷವನ್ನು ಪಡೆಯಲು ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದು ಸೂಕ್ತ. ಹನುಮಾನ್ ಚಾಲೀಸಾವನ್ನು ಪ್ರತಿದಿನ ಪಠಿಸುವುದರಿಂದ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿ, ನಂಬಿಕೆ ಮತ್ತು ನೈತಿಕತೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಕೆಟ್ಟ ಕಣ್ಣು ಮತ್ತು ನಕಾರಾತ್ಮಕತೆಯ ಪರಿಣಾಮವನ್ನು ಕಡಿಮೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...