ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ವಿವಿಧ ವಿಧಾನಗಳನ್ನು ಅನುಸರಿಸುತ್ತೇವೆ. ಪ್ರಾಣಾಯಾಮ ಕೂಡ ನಮ್ಮ ಫಿಟ್ನೆಸ್ ಮಂತ್ರಗಳಲ್ಲೊಂದು. ಇದು ಉಸಿರಾಟದ ಯೋಗ, ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
ಪ್ರಾಣಾಯಾಮದ ಸಹಾಯದಿಂದ ನೀವು ಅನೇಕ ರೀತಿಯ ಕಾಯಿಲೆಗಳನ್ನು ಸುಲಭವಾಗಿ ಗೆಲ್ಲಬಹುದು. ಆದರೆ ಪ್ರಾಣಾಯಾಮವನ್ನು ಸರಿಯಾಗಿ ಮಾಡಿದಾಗ ಅದರ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಪ್ರಾಣಾಯಾಮದ ಸಮಯದಲ್ಲಿ ನಾವು ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ಆರೋಗ್ಯಕ್ಕೆ ಅನುಕೂಲವಾಗುವ ಬದಲು ಹಾನಿಯಾಗುತ್ತದೆ.
ಕಣ್ಣು ತೆರೆಯುವುದು: ಕೆಲವರು ಪ್ರಾಣಾಯಾಮ ಮಾಡುವಾಗ ಮಧ್ಯೆ ಮಧ್ಯೆ ಪದೇ ಪದೇ ಕಣ್ಣು ತೆರೆಯುತ್ತಾರೆ. ಆದರೆ ಈ ರೀತಿ ಮಾಡಬಾರದು. ಏಕೆಂದರೆ ಕಣ್ಣುಗಳನ್ನು ತೆರೆಯುವುದರಿಂದ ಗಮನ ಅತ್ತಿತ್ತ ಹೋಗುತ್ತದೆ. ಪ್ರಾಣಾಯಾಮದ ಅನುಕ್ರಮಕ್ಕೆ ತೊಂದರೆಯಾಗುತ್ತದೆ.
ಆಸನವನ್ನು ಆಗಾಗ್ಗೆ ಬದಲಾಯಿಸುವುದು: ಪ್ರಾಣಾಯಾಮ ಮಾಡುವಾಗ ನಾವು ಒಂದೇ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಪದೇ ಪದೇ ಆಸನವನ್ನು ಬದಲಾಯಿಸುವುದರಿಂದ ನಿಮ್ಮ ಗಮನವು ವಿಚಲಿತಗೊಳ್ಳುತ್ತದೆ ಮತ್ತು ಪ್ರಾಣಾಯಾಮದ ಪೂರ್ಣ ಪ್ರಯೋಜನ ಸಿಗುವುದಿಲ್ಲ.
ಉಸಿರಾಟದ ಬಗ್ಗೆ ಗಮನ ಹರಿಸದಿರುವುದು: ಪ್ರಾಣಾಯಾಮ ಮಾಡುವಾಗ ನಿಮ್ಮ ಭಂಗಿಯ ಜೊತೆಗೆ, ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಬೇಕು. ಆದರೆ ಕೆಲವರು ಕೇವಲ ಪ್ರಾಣಾಯಾಮವನ್ನು ಅಭ್ಯಾಸ ಮಾಡುತ್ತಾರೆ, ಉಸಿರಾಟವನ್ನು ಗಮನಿಸುವುದಿಲ್ಲ. ಹೀಗೆ ಮಾಡುವುದರಿಂದ ಪ್ರಾಣಾಯಾಮದ ಲಾಭ ಸಿಗುವುದಿಲ್ಲ.
ಪರಸ್ಪರ ಹಲ್ಲು ಜೋಡಿಸುವುದು: ಪ್ರಾಣಾಯಾಮವನ್ನು ಅಭ್ಯಾಸ ಮಾಡುವಾಗ ಹಲ್ಲುಗಳನ್ನು ಪರಸ್ಪರ ಬೆರೆಸಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಏಕೆಂದರೆ ಆ ರೀತಿ ಮಾಡಿದರೆ ಪ್ರಾಣಾಯಾಮದ ಪೂರ್ಣ ಲಾಭ ಸಿಗುವುದಿಲ್ಲ.
ಅವಸರದಲ್ಲಿ ಪ್ರಾಣಾಯಾಮ: ಕೆಲವರು ಸಮಯದ ಅಭಾವದಿಂದ ತರಾತುರಿಯಲ್ಲಿ ಪ್ರಾಣಾಯಾಮ ಮಾಡುತ್ತಾರೆ. ಬೇಗ ಬೇಗನೆ ಮುಗಿಸಿ ಎದ್ದು ಹೋಗಲು ತವಕಿಸುತ್ತಾರೆ. ಈ ರೀತಿ ಅವಸರದಲ್ಲಿ ಪ್ರಾಣಾಯಾಮ ಮಾಡಿದರೆ ಆರೋಗ್ಯಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.