![](https://kannadadunia.com/wp-content/uploads/2018/11/maxresdefault-7-1024x576.jpg)
ದೀಪಾವಳಿಯ ಸಂಜೆ ದೇವಿ ಲಕ್ಷ್ಮಿ ಹಾಗೂ ಗಣೇಶನ ಪೂಜೆಯನ್ನು ಭಕ್ತರು ಭಯ – ಭಕ್ತಿಯಿಂದ ಮಾಡ್ತಾರೆ. ನೀವು ಕೂಡ ದೇವಿ ಲಕ್ಷ್ಮಿ ಜೊತೆ ಗಣೇಶನಿಗೆ ಪೂಜೆ ಮಾಡಿ. ಆದ್ರೆ ಶಾಸ್ತ್ರಗಳ ಪ್ರಕಾರ ದೇವಿ ಲಕ್ಷ್ಮಿ ಪೂಜೆ ಮಾಡುವ ವೇಳೆ ಕೆಲವೊಂದು ವಸ್ತುಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಅರಿಯದೇ ವಸ್ತುಗಳನ್ನು ಬಳಸಿದ್ರೆ ದೇವಿ ಮುನಿಸಿಕೊಳ್ತಾಳೆ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಲಕ್ಷ್ಮಿ ಪೂಜೆ ವೇಳೆ ಕೆಲವೊಂದು ವಿಷಯಗಳ ಬಗ್ಗೆ ಗಮನ ನೀಡುವುದು ಬಹಳ ಮುಖ್ಯ.
ಭಗವಂತ ವಿಷ್ಣು ತುಳಸಿ ಪ್ರಿಯ. ಆದ್ರೆ ಲಕ್ಷ್ಮಿಗೆ ತುಳಸಿ ಮೇಲೆ ದ್ವೇಷವಿದೆ. ಹಾಗಾಗಿ ಲಕ್ಷ್ಮಿ ಪೂಜೆ ಮಾಡುವ ವೇಳೆ ತುಳಸಿಯನ್ನು ಬಳಸಬೇಡಿ.
ಲಕ್ಷ್ಮಿಗೆ ದೀಪ ಬೆಳಗುವಾಗ ವರ್ತಿಯ ಬಣ್ಣ ಕೆಂಪಗಿರಲಿ. ಹಾಗೆ ದೀಪವನ್ನು ಬಲ ಭಾಗಕ್ಕಿಡಿ. ಎಡ ಭಾಗಕ್ಕೆ ದೀಪವನ್ನು ಇಡಬೇಡಿ.
ಧನಲಕ್ಷ್ಮಿ ಪೂಜೆ ಮಾಡುವ ವೇಳೆ ಅಗರಬತ್ತಿಯನ್ನು ಬಲಭಾಗಕ್ಕೆ ಹಚ್ಚಬೇಡಿ. ಅಗರಬತ್ತಿ, ಧೂಪ, ದ್ರವ್ಯಗಳನ್ನು ಎಡಭಾಗಕ್ಕೆ ಇಡಿ.
ಬಿಳಿಯ ಹೂವನ್ನು ಲಕ್ಷ್ಮಿಗೆ ಅರ್ಪಿಸಬೇಡಿ. ಕೆಂಪು ಗುಲಾಬಿ ಅಥವಾ ಕೆಂಪು ಕಮಲದ ಹೂವನ್ನು ದೇವಿಗೆ ನೈವೇದ್ಯ ಮಾಡಿ.
ಭಗವಂತ ವಿಷ್ಣುವಿನ ಪೂಜೆ ಮಾಡದೆ ನೀವು ದೇವಿ ಲಕ್ಷ್ಮಿಯ ಪೂಜೆ ಮಾಡಿದ್ರೆ ಫಲ ಸಿಗುವುದಿಲ್ಲ. ಹಾಗಾಗಿ ಸಂಜೆ ಮೊದಲು ಗಣೇಶನ ಪೂಜೆ ಮಾಡಿ ನಂತ್ರ ವಿಷ್ಣು ಹಾಗೂ ಲಕ್ಷ್ಮಿಯ ಪೂಜೆ ಮಾಡಿ.
ಲಕ್ಷ್ಮಿ ಪೂಜೆ ಮಾಡುವ ವೇಳೆ ಪ್ರಸಾದವನ್ನು ದಕ್ಷಿಣ ದಿಕ್ಕಿಗಿಡಿ. ಹಾಗೆ ಹೂ, ಪತ್ರೆಯನ್ನು ದೇವಿಯ ಮುಂದಿಡಿ.