ಕೂದಲನ್ನು ಪೋಷಿಸುವ ಕೆಲಸವನ್ನು ಎಣ್ಣೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಕೂದಲಿಗೆ ಹಾಕಲು ಬೇರೆ ಬೇರೆ ತೈಲಗಳು ಸಿಗ್ತಿವೆ. ಕೂದಲು ದಟ್ಟವಾಗಿ, ಗಟ್ಟಿಯಾಗಿ, ಹೊಳಪಾಗಿ ಕಾಣಲು ಕೂದಲಿಗೆ ಎಣ್ಣೆ ಹಚ್ಚಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವುದು, ಬೆಳ್ಳಗಾಗುವುದು ಈಗ ಸಾಮಾನ್ಯ ಎನ್ನುವಂತಾಗಿದೆ. ಹಾಗಾಗಿ ಕೂದಲಿಗೆ ಈಗ ಹೆಚ್ಚಿನ ಆರೈಕೆಯ ಅವಶ್ಯಕತೆಯಿದೆ.
ಉತ್ತಮ ಎಣ್ಣೆಯಿಂದ ಕೂದಲು ಮಸಾಜ್ ಮಾಡಿದ್ರೆ ಕೂದಲ ಸೌಂದರ್ಯ ಹೆಚ್ಚಾಗುತ್ತದೆ. ಕೂದಲಿಗೆ ಅನೇಕರು ಎಣ್ಣೆ ಹಚ್ಚಿ ಮಸಾಜ್ ಮಾಡ್ತಾರೆ. ಆದ್ರೆ ಮಸಾಜ್ ಮಾಡಿದ ನಂತ್ರ ಕೆಲವೊಂದು ತಪ್ಪುಗಳನ್ನು ಮಾಡ್ತಾರೆ. ಕೂದಲಿಗೆ ಎಣ್ಣೆ ಹಚ್ಚಿದ ನಂತ್ರ ಬಾಚಣಿಕೆಯಿಂದ ಕೂದಲನ್ನು ಬಾಚಿಕೊಳ್ಳಬೇಡಿ. ಇದು ಕೂದಲಿನ ಬುಡಕ್ಕೆ ಒತ್ತಡ ಹೆಚ್ಚು ಮಾಡುತ್ತದೆ. ಇದ್ರಿಂದ ಉದುರುವ ಸಾಧ್ಯತೆಯಿರುತ್ತದೆ.
ಕೂದಲಿಗೆ ಎಣ್ಣೆ ಹಚ್ಚಿದ ನಂತ್ರ ತುಂಬಾ ಸಮಯ ಬಿಡಬಾರದು. ಕೆಲವರು ಕೂದಲಿಗೆ ಎಣ್ಣೆ ಹಚ್ಚಿದ ನಂತ್ರ ರಾತ್ರಿ ಪೂರ್ತಿ ಬಿಡುತ್ತಾರೆ. ಇದು ತಪ್ಪು. ಹೆಚ್ಚೆಂದ್ರೆ ಎರಡು ಗಂಟೆ ಬಿಟ್ಟು ಕೂದಲನ್ನು ಸ್ವಚ್ಛಗೊಳಿಸಿ.
ಎಣ್ಣೆ ಹಚ್ಚಿದ ನಂತ್ರ ಕೂದಲನ್ನು ಬಿಗಿಯಾಗಿ ಕಟ್ಟಬಾರದು. ಇದು ಕೂದಲಿನ ಬುಡದ ಮೇಲೆ ಒತ್ತಡ ಬೀಳುವಂತೆ ಮಾಡುತ್ತದೆ. ಇದು ಕೂದಲು ಉದುರಲು ಕಾರಣವಾಗುತ್ತದೆ.