ಪ್ರತಿದಿನದ ಬೆಳಗು ನಮ್ಮ ಬದುಕಿನ ಶುಭಾರಂಭವಿದ್ದಂತೆ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯಾವುದೇ ವಿಘ್ನಗಳು ಎದುರಾಗಬಾರದು. ಅದಕ್ಕಾಗಿ ಕೆಲವೊಂದು ಕೆಲಸಗಳಿಂದ ನೀವು ದೂರವಿರಬೇಕು. ಯಾಕಂದ್ರೆ ಅವು ನಮ್ಮ ಕೆಲಸವನ್ನೇ ಬಿಗಡಾಯಿಸಿಬಿಡುತ್ತವೆ.
ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬೇಡಿ : ವಾಸ್ತು ಶಾಸ್ತ್ರದ ಪ್ರಕಾರ ಬೆಳಗ್ಗೆ ಏಳ್ತಿದ್ದಂತೆ ಕನ್ನಡಿ ನೋಡುವುದರಿಂದ ರಾತ್ರಿಯ ನಕಾರಾತ್ಮಕತೆ ಪುನಃ ಸ್ಥಾಪಿತವಾಗುತ್ತದೆ. ಇಡೀ ದಿನ ನಿಮ್ಮ ಮನಸ್ಸು ಅದೇ ರೀತಿಯಾಗಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಸ್ವಲ್ಪ ಸಮಯದ ನಂತರ ಕನ್ನಡಿಯಲ್ಲಿ ಮುಖ ದರ್ಶನ ಮಾಡಿ.
ಬೆಳಗ್ಗೆ ಎದ್ದ ತಕ್ಷಣ ಚಪ್ಪಲಿ-ಬೂಟುಗಳ ದರ್ಶನ ಬೇಡ : ಬೆಳಗ್ಗೆ ಎದ್ದ ತಕ್ಷಣ ಚಪ್ಪಲಿ ಮತ್ತು ಬೂಟುಗಳು ನಿಮ್ಮ ಕಣ್ಣಿಗೆ ಬಿದ್ದಲ್ಲಿ, ನಿಮ್ಮ ಮನಸ್ಸು ಮತ್ತೆ ನಕಾರಾತ್ಮಕವಾಗುತ್ತದೆ. ಹಾಗಾಗಿ ಹಾಸಿಗೆಯ ಅಕ್ಕಪಕ್ಕದಲ್ಲಿ ಚಪ್ಪಲಿಯನ್ನು ಇಟ್ಟುಕೊಳ್ಳಬೇಡಿ.
ತಿಂದ ಪಾತ್ರೆಗಳನ್ನು ನೋಡಬೇಡಿ : ರಾತ್ರಿ ಊಟವಾದ ನಂತರ ಪಾತ್ರೆಗಳನ್ನು ತೊಳೆದಿಡಿ. ಒಂದು ವೇಳೆ ತೊಳೆಯಲು ಸಾಧ್ಯವಾಗಿಲ್ಲ ಎಂದಾದಲ್ಲಿ ಸ್ವಲ್ಪ ನೀರು ಹಾಕಿ ಚೆಲ್ಲಿ ಇಟ್ಟುಬಿಡಿ. ಯಾಕಂದ್ರೆ ಬೆಳಗ್ಗೆ ಎದ್ದ ತಕ್ಷಣ ತಿಂದ ಪಾತ್ರೆಗಳನ್ನು ನೋಡುವುದರಿಂದ ದಾರಿದ್ರ್ಯ ಬರುತ್ತದೆ.
ಭಿಕ್ಷುಕರನ್ನು ಬರಿಗೈಯಲ್ಲಿ ಕಳಿಸಬೇಡಿ : ಬೆಳಗ್ಗೆ ಸಾಮಾನ್ಯವಾಗಿ ಭಿಕ್ಷುಕರು ಮನೆ ಮನೆಗೆ ಬಂದು ಬೇಡುವುದು ಸಾಮಾನ್ಯ. ಅವರನ್ನು ಯಾವುದೇ ಕಾರಣಕ್ಕೂ ಬರಿಗೈಯಲ್ಲಿ ಕಳುಹಿಸಬೇಡಿ. ಭಿಕ್ಷುಕರಿಗೆ ಸಹಾಯ ಮಾಡುವ ಜೊತೆಗೆ ದುಡಿದು ತಿನ್ನುವಂತೆ ಪ್ರೇರೇಪಿಸಿ. ಅದರಿಂದ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕತೆ ಜಾಗೃತವಾಗುತ್ತದೆ.