ಫೆಂಗ್ ಶುಯಿಯಲ್ಲಿ ಗಿಡ ಹಾಗೂ ಹೂವಿಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಗಿಡ ಹಾಗೂ ಹೂಗಳಿದ್ದರೆ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ. ಅನೇಕರು ತಮ್ಮ ಮನೆ ಹಾಗೂ ಆಫೀಸಿನಲ್ಲಿ ಸಣ್ಣಪುಟ್ಟ ಗಿಡಗಳ ಜೊತೆಗೆ ಹೂವಿನ ಕುಂಡವನ್ನು ಇಡುತ್ತಾರೆ. ಆದ್ರೆ ಕೆಲವೊಂದು ಹೂವು ಮನೆ ಹಾಗೂ ಕಚೇರಿಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡಲು ಕಾರಣವಾಗುತ್ತದೆ.
ಮನೆ ಅಥವಾ ಆಫೀಸಿನ ಹೂ ಕುಂಡದಲ್ಲಿ ಎಂದೂ ಬಾಡಿದ ಹೂವನ್ನು ಇಡಬೇಡಿ. ಹೂವು ಬಾಡಿ, ಉದುರಲು ಶುರುವಾದ್ರೆ ತಕ್ಷಣ ಅದನ್ನು ಬದಲಾಯಿಸಿ. ತಾಜಾ ಹೂವು ಜೀವನದ ಪ್ರತೀಕವಾಗಿದೆ. ಸತ್ತ ಹೂವು ಮೃತ್ಯುವಿನ ಸಂಕೇತವಾಗಿದೆ. ಉದುರಿದ ಹೂವು ನಕಾರಾತ್ಮಕ ಶಕ್ತಿಯ ಸಂಕೇತವಾಗಿದೆ.
ಹೂವಿನ ಗಿಡವನ್ನು ಡೈನಿಂಗ್ ರೂಮಿನಲ್ಲಿಡಿ. ಮರೆತೂ ಬೆಡ್ ರೂಮಿನಲ್ಲಿ ಹೂವಿನ ಗಿಡವನ್ನಿಡಬೇಡಿ. ಮನೆಯಲ್ಲಿ ಅನಾರೋಗ್ಯ ವ್ಯಕ್ತಿಗಳಿದ್ದರೆ ಅವರು ಮಲಗುವ ಸ್ಥಳದಲ್ಲಿ ಹೂವಿನ ಗಿಡವನ್ನಿಡಬಹುದು.
ತಾಜಾ ಹೂವನ್ನು ಪ್ರತಿದಿನ ಇಡಲು ಸಾಧ್ಯವಿಲ್ಲವೆಂದಾದ್ರೆ ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ಮಾಡಿದ ಕೃತಕ ಹೂವನ್ನು ಇಡಬಹುದು. ಆದ್ರೆ ಅದು ಕೂಡ ಹಾಳಾಗಿರಬಾರದು.
ಮನೆ ಹಾಗೂ ಕಚೇರಿಯ ಕಂಪ್ಯೂಟರ್ ಬಳಿ ತಾಜಾ ಹೂವಿನ ಗಿಡ ಇರುವಂತೆ ನೋಡಿಕೊಳ್ಳಿ.