ಆಧುನಿಕ ಜೀವನಶೈಲಿಯಿಂದಾಗಿ ಮದ್ಯ ಸೇವನೆ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವರು ಖುಷಿಗೆ ಕುಡಿದರೆ, ಮತ್ತೆ ಕೆಲವರು ದುಃಖಕ್ಕೆ ಕುಡಿಯುತ್ತಾರೆ.
ಹೀಗೆ ಖುಷಿ ಮತ್ತು ದುಃಖಕ್ಕೆ ಎಣ್ಣೆ ಹೊಡೆದು ಆ ಮತ್ತಿನಲ್ಲಿ ಏನೆಲ್ಲಾ ಅನಾಹುತಕ್ಕೆ ಕಾರಣರಾಗುತ್ತಾರೆ ಎಂಬುದು ಗೊತ್ತೇ ಇದೆ.
ಬೇಕಾಬಿಟ್ಟಿ ಮದ್ಯ ಸೇವಿಸಿ ಮತ್ತಿನಲ್ಲಿ ಮೈಮರೆಯುವವರಿಗಾಗಿ ಒಂದಿಷ್ಟು ಸಲಹೆ ಇಲ್ಲಿವೆ ನೋಡಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು, ಅಲ್ಲದೇ, ಪೋನ್ ನಲ್ಲಿ ಮಾತನಾಡುವುದಾಗಲೀ ಮೆಸೇಜ್ ಮಾಡುವುದಾಗಲಿ ಮಾಡಬಾರದು. ತಮ್ಮದೇ ಭಾವಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಲು ಪ್ರಯತ್ನಿಸಬಾರದು. ಹೀಗೆ ಮಾಡಲು ಮುಂದಾದಲ್ಲಿ ಕೆಲವೊಮ್ಮೆ ನಿಮ್ಮ ಅರಿವಿಗೆ ಬಾರದಂತೆಯೇ ಆಪತ್ತಿಗೆ ಸಿಲುಕುವ ಸಾಧ್ಯತೆಗಳು ಇರುತ್ತವೆ.
ಅದರಲ್ಲಿಯೂ ಮದ್ಯ ಸೇವಿಸಿದ ಸಂದರ್ಭದಲ್ಲಿ ಹಳೆ ಗರ್ಲ್ ಫ್ರೆಂಡ್ ನೆನಪು ಮಾಡಿಕೊಂಡು ಫೋನ್ ಮಾಡಬೇಡಿ, ಇದರಿಂದ ಸಂಬಂಧ ಇನ್ನಷ್ಟು ಹಳಸುತ್ತದೆ. ಮದ್ಯಪಾನ ಮಾಡಿದಾಗ ಕೆಲಸಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡದಿರುವುದೇ ಸೂಕ್ತ. ಇಂತಹವುಗಳ ಬಗ್ಗೆ ನಿಗಾ ವಹಿಸಿ. ಮದ್ಯ ಸೇವಿಸಿದಾಗ ಸೌಮ್ಯವಾಗಿರುವುದನ್ನು ಕಲಿಯಿರಿ. ಆದಷ್ಟು ನಿಮ್ಮ ಹಿಡಿತ ನಿಮ್ಮ ಕೈಯಲ್ಲಿರಲಿ.