ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚಿನ ದಿನಗಳಲ್ಲಿ ಸಸ್ಯಹಾರಿಗಳು ಕೂಡ ಮೊಟ್ಟೆ ಸೇವನೆ ಶುರು ಮಾಡಿದ್ದಾರೆ. ಮೊಟ್ಟೆ ಸೇವನೆ ಬಗ್ಗೆ ಸರಿಯಾಗಿ ತಿಳಿದಿರಬೇಕು. ಕೆಲವೊಮ್ಮೆ ಮೊಟ್ಟೆ ಜೊತೆ ನಾವು ಬೇರೆ ಆಹಾರವನ್ನು ಸೇವನೆ ಮಾಡ್ತೇವೆ. ಅದು ಮೊಟ್ಟೆ ಜೊತೆ ಹೊಂದಿಕೊಳ್ಳುವುದಿಲ್ಲ. ಇದ್ರಿಂದಾಗಿ ಆಯಾಸ, ವಾಕರಿಕೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹುಟ್ಟಿಕೊಳ್ಳುತ್ತದೆ.
ಮೊಟ್ಟೆ ಸೇವನೆ ಮಾಡುವಾಗ ಸಕ್ಕರೆಯನ್ನು ದೂರವಿಡಿ. ಮೊಟ್ಟೆ ಜೊತೆ ಸಕ್ಕರೆ ಸೇವನೆ ಮಾಡಬೇಡಿ. ಮೊಟ್ಟೆ ಜೊತೆ ಸಕ್ಕರೆ ಹಾಕಿ ಬೇಯಿಸಿದ್ರೆ ಎರಡರಿಂದಲೂ ಬಿಡುಗಡೆಯಾಗುವ ಅಮೈನೋ ಆಮ್ಲಗಳು ದೇಹಕ್ಕೆ ವಿಷಕಾರಿಯಾಗಬಹುದು. ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡಬಹುದು.
ಸೋಯಾ ಹಾಲು ಮತ್ತು ಮೊಟ್ಟೆಗಳು ದೇಹಕ್ಕೆ ಪ್ರತ್ಯೇಕವಾಗಿ ಪ್ರಯೋಜನಕಾರಿ. ಆದರೆ ಅವುಗಳನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ. ಇದ್ರಿಂದ ದೇಹ ಪ್ರೋಟೀನ್ ಹೀರಿಕೊಳ್ಳುವುದನ್ನು ನಿಲ್ಲಿಸುತ್ತದೆ.
ಮೊಟ್ಟೆ ಮತ್ತು ಮೀನುಗಳನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಇದು ಅಲರ್ಜಿ ಸಮಸ್ಯೆಗೆ ಕಾರಣವಾಗುತ್ತದೆ. ಮೀನಿನಂತೆ, ಪನೀರ್ ಜೊತೆ ಕೂಡ ಮೊಟ್ಟೆ ಸೇವನೆ ಮಾಡಬಾರದು.
ಟೀ ಅನೇಕರಿಗೆ ಇಷ್ಟ. ಟೀ ಜೊತೆ ಬೇರೆ ಬೇರೆ ಆಹಾರವನ್ನು ಸೇವನೆ ಮಾಡ್ತಾರೆ. ಆದ್ರೆ ಟೀ ಜೊತೆ ಮೊಟ್ಟೆ ಸೇವನೆ ಮಾಡಬಾರದು. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಮಲಬದ್ಧತೆ ಉಂಟಾಗುತ್ತದೆ.
ಬಾಳೆಹಣ್ಣು, ಕಲ್ಲಂಗಡಿ, ಚೀಸ್, ಡೈರಿ ಉತ್ಪನ್ನಗಳು ಮತ್ತು ಬೀನ್ಸ್ ಜೊತೆ ಮೊಟ್ಟೆ ಸೇವನೆ ಬೇಡ.ಇದು ದೇಹಕ್ಕೆ ಹಾನಿಯುಂಟು ಮಾಡಿತ್ತದೆ. ಮಲಬದ್ಧತೆ,ಗ್ಯಾಸ್ ಗೆ ಕಾರಣವಾಗುತ್ತದೆ.