ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ಅಥವಾ ಒಳ್ಳೆಯ ಕೆಲಸ ಆರಂಭಿಸುವಾಗ ನಾವು ಒಳ್ಳೆಯ ಸಮಯ ನೋಡುತ್ತೇವೆ. ಹಾಗೆಯೇ ಮನೆಗೆ ಏನಾದರೂ ವಸ್ತುಗಳನ್ನು ತರಲು ಕೂಡ ಒಳ್ಳೆಯ ಸಮಯ, ಕೆಟ್ಟ ಸಮಯ ಎಂಬುದು ಇರುತ್ತದೆ.
ಒಂದು ಒಳ್ಳೆಯ ವಸ್ತುವನ್ನು ಕೆಟ್ಟ ಸಮಯದಲ್ಲಿ ತಂದರೆ ಆ ಒಳ್ಳೆಯ ವಸ್ತು ಕೂಡ ಮನೆಗೆ ಅಶುಭವನ್ನು ಉಂಟುಮಾಡಬಹುದು. ಹಾಗೆಯೇ ಹಿಂದು ಧರ್ಮದಲ್ಲಿ ಅಮವಾಸ್ಯೆಯ ದಿನವನ್ನು ಪೂರ್ವಜರಿಗೆ ಅರ್ಪಿಸಲಾಗಿದೆ. ಸಾಮಾನ್ಯವಾಗಿ ಅಂದು ಯಾವ ಕೆಲಸವನ್ನೂ ಆರಂಭಿಸುವುದಿಲ್ಲ. ಹಾಗೇ ಕೆಲವು ವಸ್ತುಗಳನ್ನು ಕೂಡ ಮನೆಗೆ ತರುವುದಿಲ್ಲ.
ಪೂಜೆಯ ಸಾಮಗ್ರಿ, ದೇವರ ವಸ್ತ್ರವನ್ನು ಅಮವಾಸ್ಯೆಯ ದಿನ ಖರೀದಿಸಬಾರದು. ಹೀಗೆ ಮಾಡುವುದರಿಂದ ನಿಮಗೆ ಕಷ್ಟಗಳು ಎದುರಾಗಬಹುದು.
ಅಮವಾಸ್ಯೆಯ ದಿನ ಪೊರಕೆಯನ್ನು ಖರೀದಿಸುವುದರಿಂದ ದೇವಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ. ಇದರಿಂದ ಧನಹಾನಿ ಕೂಡ ಆಗುತ್ತದೆ. ಹಾಗಾಗಿ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕೆಂದರೆ ಅಮವಾಸ್ಯೆಯ ದಿನ ಪೊರಕೆಯನ್ನು ಖರೀದಿಸಬಾರದು.
ಮದ್ಯ ಸೇವನೆ ಎಂದೂ ಮಾಡಬಾರದು. ಅದರಲ್ಲೂ ಕೆಲವು ಮುಖ್ಯ ದಿನದಲ್ಲಿ ಮದ್ಯ ಮತ್ತು ಮಾಂಸವನ್ನು ಸೇವಿಸುವುದರಿಂದ ಜೀವನದಲ್ಲಿ ಅನೇಕ ಕಷ್ಟಗಳು ಬರಬಹುದು. ಧರ್ಮಶಾಸ್ತ್ರದ ಪ್ರಕಾರ ಅಮವಾಸ್ಯೆಯ ದಿನ ಮದ್ಯ ಮತ್ತು ಮಾಂಸ ಸೇವನೆ ಮಾಡುವುದರಿಂದ ಪೂರ್ವಜರು ಕೋಪಗೊಳ್ಳುತ್ತಾರೆ ಮತ್ತು ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ.
ಅಮವಾಸ್ಯೆಯ ದಿನ ಎಣ್ಣೆಯನ್ನು ಹಚ್ಚಿಕೊಳ್ಳಬಾರದು. ಅಮವಾಸ್ಯೆಯ ದಿನ ಎಣ್ಣೆಯನ್ನು ದಾನ ಮಾಡಿದರೆ ಶುಭವಾಗುತ್ತದೆ.
ಅಮವಾಸ್ಯೆಯ ದಿನ ಗೋಧಿ ಮತ್ತು ಉಪ್ಪನ್ನು ಖರೀದಿಸುವುದು ಅಶುಭ ಮತ್ತು ಇದರಿಂದ ಪೂರ್ವಜರು ಕೋಪಗೊಳ್ಳುತ್ತಾರೆ.