ಊಟಕ್ಕೆ ಉಪ್ಪು ಬಹಳ ಮುಖ್ಯ. ಅನೇಕರು ಊಟಕ್ಕೆ ಪ್ರತ್ಯೇಕವಾಗಿ ಉಪ್ಪು ಹಾಕಿಕೊಳ್ತಾರೆ. ಆದ್ರೆ ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಪದ್ಧತಿ ಜಾರಿಯಲ್ಲಿದೆ. ಆಚಾರ-ವಿಚಾರಗಳಿಂದ ಹಿಡಿದು ಉಡುಗೆ-ತೊಡುಗೆಗಳವರೆಗೆ ಎಲ್ಲದರಲ್ಲೂ ಒಂದಿಷ್ಟು ಬದಲಾವಣೆ ಇರುತ್ತದೆ.
ಹಾಗೇಯೇ ಆಹಾರ ಪದ್ಧತಿ ಕೂಡ. ಭಾರತದ ಪದ್ಧತಿಗಳನ್ನು ಆ ದೇಶಗಳಲ್ಲಿ ಪಾಲನೆ ಮಾಡಿದ್ರೆ ತೊಂದರೆ ಅನುಭವಿಸುವಂತಾಗುತ್ತದೆ.
ಊಟಕ್ಕೆ ಉಪ್ಪು ಬೇಕೇ ಬೇಕು. ಉಪ್ಪಿಲ್ಲದೆ ಯಾವ ಆಹಾರವೂ ರುಚಿಸುವುದಿಲ್ಲ. ಅತಿಥಿಗಳ ಮನೆಗೆ ಹೋದಾಗ ಅಥವಾ ಮದುವೆ ಸಮಾರಂಭಗಳಿಗೆ ಹೋದಾಗ, ರುಚಿಗಾಗಿ ಕೆಲವರು ಮೇಲೆ ಉಪ್ಪು ಹಾಕಿಕೊಳ್ತಾರೆ. ಈಜಿಪ್ಟನಲ್ಲಿ ಅತಿಥಿಗಳು ಉಪ್ಪು ಕೇಳಿದರೆ ಅದು ಅವಮಾನ ಮತ್ತು ಅಪಶಕುನವಂತೆ. ಈಜಿಪ್ಟನಲ್ಲಿ ಇಂತಹದೊಂದು ಸಂಪ್ರದಾಯವಿದೆ.
ಈಜಿಪ್ಟ್ ನಲ್ಲಿ ಊಟದ ಸಮಯದಲ್ಲಿ ಉಪ್ಪನ್ನು ಕೇಳುವುದು ತಪ್ಪು. ಉಪ್ಪು ಕೇಳಿದ್ರೆ ಅವರಿಗೆ ತೊಂದರೆಯಾಗಿದೆ ಎಂದರ್ಥ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಊಟದ ಮಧ್ಯೆ ಉಪ್ಪು ಕೇಳುತ್ತಾರೆ. ಈಜಿಪ್ಟ್ ನಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಊಟ ಮಾಡುವಾಗ, ಉಪ್ಪು ಕೇಳಬೇಡಿ. ಆಹಾರದ ರುಚಿಯನ್ನು ದ್ವೇಷಿಸುತ್ತೀರಿ ಎಂಬ ಸಂಕೇತ ನೀಡುತ್ತದೆಯಂತೆ. ಈಜಿಪ್ಟ್ ನಲ್ಲಿ ಉಪ್ಪಿನಕಾಯಿಯನ್ನು ಮುಟ್ಟದಿರುವುದು ಉತ್ತಮ. ಯಾಕೆಂದ್ರೆ ತಟ್ಟೆಗೆ ಉಪ್ಪಿನಕಾಯಿ ಹಾಕಿದ್ರೆ ಊಟದ ರುಚಿ ಬದಲಿಸುತ್ತಿದ್ದೀರಿ ಎಂದರ್ಥ. ಇದು ಅವಮಾನ ಮಾಡಿದಂತೆ.