ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕೇ…? ಎಂಬ ಪ್ರಶ್ನೆ ಹರಡಿದೆ. ಇದಕ್ಕೆ ಉತ್ತರ ಇಲ್ಲ. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಲಸಿಕೆ ಪಡೆದವರು ಕೋವಿಡ್ ಪರೀಕ್ಷೆಗೆ ಒಳಗಾಗುವ ಅಗತ್ಯವಿಲ್ಲ.
ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರಗಳು ಕಳುಹಿಸಿರುವ ಮಾರ್ಗಸೂಚಿಗಳ ಪ್ರಕಾರ ನೀವು ಒಮ್ಮೆ ಲಸಿಕೆ ಪಡೆದುಕೊಂಡ ಬಳಿಕ ಪರೀಕ್ಷೆಗೆ ಒಳಗಾಗುವ ಅಥವಾ ಕ್ವಾರಂಟೈನ್ಗೆ ಒಳಗಾಗಬೇಕಾದ ಯಾವುದೇ ಅಗತ್ಯವಿಲ್ಲ. ಸೋಂಕು ತಗುಲಿರುವ ವ್ಯಕ್ತಿಯೊಂದಿಗೆ ನೀವು ಸಂಪರ್ಕದಲ್ಲಿ ಬಂದಿದ್ದರೂ ಸಹ ಸೋಂಕಿನ ಪರೀಕ್ಷೆಗೆ ಒಳಗಾಗಬೇಕಾದ ಅಗತ್ಯವಿಲ್ಲ.
ಆದರೆ ಜ್ವರ, ಕೆಮ್ಮು, ಮೈ-ಕೈ ನೋವುಗಳಂಥ ರೋಗಲಕ್ಷಣಗಳು ಕಂಡುಬಂದಲ್ಲಿ ನೀವು ಸೋಂಕಿನ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಲಸಿಕೆ ಹಾಕಿಸಿಕೊಂಡ ಬಳಿಕ ಗಂಭೀರವಾದ ಮಟ್ಟದಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಕಡಿಮೆ ಇದ್ದು, ಒಂದು ವೇಳೆ ನಿಮಗೆ ಸೋಂಕು ತಗುಲಿದರೂ ಸಹ ಅದನ್ನು ಅನ್ಯರಿಗೆ ಅಂಟಿಸುವ ಸಾಧ್ಯತೆಗಳು ಬಹಳವೇ ಕಡಿಮೆ ಇರಲಿವೆ.
ಆದರೆ ಈ ಸಡಿಲಿಕೆಗಳು ವೈದ್ಯರಿಗೆ, ನರ್ಸ್ಗಳಿಗೆ ಹಾಗೂ ಆರೋಗ್ಯ ಸೇವೆಯ ಇತರೆ ಕಾರ್ಯಕರ್ತರಿಗೆ ಅನ್ವಯವಾಗದೇ ಇರುವ ಕಾರಣ ಇವರು ಕೆಲಸ ಮಾಡುವ ಸಂಸ್ಥೆಗಳ ಆಡಳಿತ ವರ್ಗಗಳು ಬಯಸಿದಲ್ಲಿ ಇನ್ನೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಬೇಕಾಗಬಹುದು.