ಗಂಟೆಗೆ 172 ಕಿಲೋಮೀಟರ್ ವೇಗದ ಗುರಿಯನ್ನು ಕೆಲ ಸೆಕೆಂಡ್ನಲ್ಲಿ ತಲುಪಬಲ್ಲ ವಿಶ್ವದ ಅತ್ಯಂತ ವೇಗದ ರೋಲರ್ ಕೋಸ್ಟರ್ ಸ್ಥಗಿತಗೊಂಡಿದೆ.
ಜಪಾನ್ನ ಫುಜಿಯಾಶಿದಾದ ಫುಜಿ ಕ್ಯೂನಲ್ಲಿರುವ ಈ ರೋಲರ್ ಕೋಸ್ಟರ್ನಲ್ಲಿ 21 ಡಿಸೆಂಬರ್ 2001ರಲ್ಲಿ ಅನಾವರಣಗೊಳಿಸಲಾಗಿತ್ತು. ಈ ವೇಗದ ರೋಲರ್ ಕೋಸ್ಟರ್ನ್ನು ಸ್ಯಾನ್ಸೆ ಟೆಕ್ನಾಲಜೀಸ್ ನಿರ್ಮಾಣ ಮಾಡಿತ್ತು.
ವಿಶ್ವದಲ್ಲೇ ಅತೀ ವೇಗದ ರೋಲರ್ ಕೋಸ್ಟರ್ ಎಂಬ ಹೆಸರು ಪಡೆದಿರುವ ಡು – ಡೊಂಡೊಪಾ ಮೇಲೆ ಸವಾರಿ ಮಾಡಲು ವಿಶ್ವದ ಮೂಲೆ ಮೂಲೆಯಿಂದ ಅನೇಕರು ಆಗಮಿಸುತ್ತಿದ್ದರು. ಬಹುತೇಕರು ಇದೊಂದು ಭಯಾನಕ ರೈಡ್ ಎಂತಲೇ ಹೇಳುತ್ತಿದ್ದರು.
ಆದರೆ ಇನ್ಮೇಲೆ ಯಾರಿಗೂ ಕೂಡ ಈ ಭಯಾನಕ ಅನುಭವವನ್ನು ಪಡೆಯಲು ಸಾಧ್ಯವಿಲ್ಲ. ಮುಂದಿನ ನೋಟಿಸ್ ಬರುವವರೆಗೂ ದೊ ದೊದೊಂಪಾ ಸಾರ್ವಜನಿಕರ ಬಳಕೆ ಲಭ್ಯವಿರೋದಿಲ್ಲ. ಅನೇಕರು ಈ ರೋಲ್ ಕಾಸ್ಟರ್ ಏರಿ ಮೂಳೆ ಮೂರಿದುಕೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ವರದಿಯ ಪ್ರಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದ ಕನಿಷ್ಟ 6 ಮಂದಿಯಾದರೂ ರೋಲರ್ ಕೋಸ್ಟರ್ ಅನುಭವ ಪಡೆಯಲು ಹೋಗಿ ಮೂಳೆ ಮುರಿದುಕೊಂಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಕೇವಲ ಒಬ್ಬ ಗ್ರಾಹಕ ಮಾತ್ರ ದೊ ದೊದೊಂಪಾ ದಿಂದ ಗಾಯಗೊಂಡಿದ್ದರು. ಆದರೆ ಕಳೆದೊಂದು ವರ್ಷದಲ್ಲಿ ಗಾಯಾಳುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.
2007ರ ಮೇ 15ರಂದು 37 ವರ್ಷದ ವ್ಯಕ್ತಿಯ ಮೊಣಕಾಲಿಗೆ ಪ್ಲಾಸ್ಟಿಕ್ ಹೊದಿಕೆ ಬಡಿದ ಪರಿಣಾಮ ಸಣ್ಣಪುಟ್ಟ ಗಾಯಗಳಾಗಿತ್ತು. ಆದರೆ ಕಳೆದೊಂದು ವರ್ಷದಲ್ಲಿ ಗ್ರಾಹಕರು ಗಂಭೀರವಾಗಿಯೇ ಗಾಯಗೊಂಡಿದ್ದಾರೆ ವಿಚಿತ್ರ ಅಂದರೆ ರೋಲರ್ ಕೋಸ್ಟರ್ನಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ. ಆದರೂ ಸೆನ್ಸೈ ಟೆಕ್ನಾಲಜೀಸ್ ಗಾಯಾಳುಗಳ ಬಳಿ ಕ್ಷಮೆಯಾಚಿಸಿದೆ. ಅವರೆಲ್ಲ ಏಕೆ ಗಾಯಗೊಂಡಿದ್ದಾರೆ ಅನ್ನೋದಕ್ಕೆ ಕಾರಣ ಹುಡುಕಲಾಗುತ್ತಿದೆ.