ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ..? ಪ್ರಶ್ನೆಗಳನ್ನು ಹುಟ್ಟುಹಾಕಿದೆ ಯುಎಫ್ಒ ವಿಡಿಯೋ 19-05-2022 6:51AM IST / No Comments / Posted In: Featured News, Live News, International ಇಂದಿಗೂ ಕೂಡ ಜಗತ್ತನ್ನು ಕಾಡುತ್ತಿರುವುದು ಒಂದೇ ಒಂದು ಪ್ರಶ್ನೆ. ಅದು ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ ಎಂಬುದಾಗಿದೆ. ಅನ್ಯಗ್ರಹಗಳಲ್ಲಿ ಜೀವಿಗಳಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದು, ಇದುವರೆಗೂ ನಿಖರವಾದ ಮಾಹಿತಿ ಲಭಿಸಿಲ್ಲ. ಇದೀಗ 50 ವರ್ಷಗಳಲ್ಲಿ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳಲ್ಲಿ ಪೆಂಟಾಗನ್ ಮೊದಲ ಬಾರಿಗೆ ಯುಎಫ್ಒ ವಿಡಿಯೋಗಳನ್ನು ತೋರಿಸಿದೆ. ಅಮೆರಿಕಾ ನೌಕಾ ಗುಪ್ತಚರ ವಿಭಾಗದ ಉಪ ನಿರ್ದೇಶಕ ಸ್ಕಾಟ್ ಬ್ರೇ ಅವರು, ಈ ಹಿಂದೆ ಆಕಾಶದಲ್ಲಿ ಹಾರುವ ಗೋಳಾಕಾರದ ವಸ್ತುಗಳ ವಿಡಿಯೋಗಳನ್ನು ತೋರಿಸಿದ್ದಾರೆ. ಒಂದು ಸಂಕ್ಷಿಪ್ತ ಮತ್ತು ಅಲುಗಾಡುವ ವಿಡಿಯೋದಲ್ಲಿ, ಮಿಲಿಟರಿ ಪೈಲಟ್ನ ಹಿಂದೆ ಸಣ್ಣ ವಸ್ತು ಕಾಣಿಸಿಕೊಂಡಿತು. ಪ್ರತ್ಯೇಕ ಕ್ಲಿಪ್ ಮತ್ತು ವಿಭಿನ್ನ ಸಮಯಗಳಲ್ಲಿ ತೆಗೆದ ಇದೇ ರೀತಿಯ ಫೋಟೋದಲ್ಲಿ, ರಾತ್ರಿಯ ಆಕಾಶದಲ್ಲಿ ಹೊಳೆಯುವ ತ್ರಿಕೋನಗಳು ಕಂಡುಬರುತ್ತವೆ. ಚಿತ್ರಗಳು ಮತ್ತು ವಿಡಿಯೋಗಳನ್ನು ಪ್ರಸ್ತುತಪಡಿಸುವಾಗ, ಬ್ರೇ ಅವರಿಗೆ ಹೊಳೆಯುವ ತ್ರಿಕೋನಗಳ ವಿಡಿಯೋ ಮತ್ತು ಫೋಟೋ ಸ್ವಲ್ಪ ಸಮಯದವರೆಗೆ ಪರಿಹರಿಸಲಾಗಲಿಲ್ಲ. ಆದರೆ, ಅಂತಿಮವಾಗಿ ಮಾನವರಹಿತ ವೈಮಾನಿಕ ವಾಹನಗಳು ಎಂದು ಗುರುತಿಸಲಾಯಿತು. ಆದಾಗ್ಯೂ, ಮೊದಲ ವಿಡಿಯೋದಲ್ಲಿರುವ ವಸ್ತು ಯಾವುದು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಯುಎಫ್ಒಗಳ 400ಕ್ಕೂ ಹೆಚ್ಚು ವರದಿಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆದರೆ, ಅವರು ಗುರುತಿಸದ ವಸ್ತುಗಳು ಅನ್ಯಲೋಕದ್ದು ಆಗಿರಬಹುದು ಎಂಬ ಕಲ್ಪನೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ರು.