ಕೊರೊನಾ ಸಾಂಕ್ರಾಮಿಕ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ. ಹಾಗಂತ ಕೆಟ್ಟದಾಗಿಯೂ ಇಲ್ಲ. ಇಂಥ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯು ವೈಯಕ್ತಿಕ ಸಾಲ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಹಲವರು ತಜ್ಞರ ಬಳಿ ಕೇಳಿರುತ್ತಾರೆ. ಅಂಥವರಿಗೆ ಇಲ್ಲಿದೆ ಆಪ್ತ ಸಲಹೆ.
ತೀರ ಅಗತ್ಯವಲ್ಲದ ಖರ್ಚಿಗೆ ವೈಯಕ್ತಿಕ ಸಾಲ ಪಡೆಯಲು ಇದು ಸಕಾಲವಲ್ಲ. ಬಡ್ಡಿ ದರವು ಎಷ್ಟೇ ಇರಲಿ ಸಾಲ ಮಾಡಿಕೊಂಡು, ಭವಿಷ್ಯದಲ್ಲಿ ಸಾಲದ ಸುಳಿಯಲ್ಲೇ ಮುಳುಗುವ ಅನಿಶ್ಚಿತತೆಗೆ ಸಿಲುಕಿಕೊಳ್ಳಬೇಡಿರಿ. ಯಾಕೆಂದರೆ, ಕೊರೊನಾ ಹಾವಳಿ ಯಾವ ರೂಪ ಪಡೆಯಲಿದೆ ಎಂಬ ಬಗ್ಗೆ ವಿಜ್ಞಾನಿಗಳು, ತಜ್ಞ ವೈದ್ಯರಲ್ಲಿ ಬಹಳ ಸಂಶಯಗಳಿವೆ.
ಕಂಗನಾಗೆ ಸಂಗೀತ ನಿರ್ದೇಶಕ ವಿಶಾಲ್ ಖಡಕ್ ತಿರುಗೇಟು
ಫ್ರಾನ್ಸ್, ಅಮೆರಿಕ, ಜರ್ಮನಿಗಳಲ್ಲಿ ಹಲವು ಅಲೆಗಳಾಗಿ ಕೊರೊನಾ ವೈರಾಣು ಅಪ್ಪಳಿಸಿದೆ. ಅಂದರೆ, ಸೋಂಕು ಪದೇಪದೆ ಬೇರೆ ರೂಪದಲ್ಲಿ ಜನರನ್ನು ಬಾಧಿಸುತ್ತಿದೆ. ಚೀನಾದ ಕೆಲವು ಪ್ರಾಂತ್ಯಗಳಲ್ಲಿ ಕೊರೊನಾ ಸೋಂಕು ಮಿತಿಮೀರಿದ ಹಿನ್ನೆಲೆಯಲ್ಲಿ ಮನೆಗಳ ಶಟ್‌ಡೌನ್ ಹಾಗೂ ನಗರಗಳ ಲಾಕ್‌ಡೌನ್ ಮಾಡಲಾಗುತ್ತಿದೆ. ಹಾಗಾಗಿ ಇದು ಅನಿಶ್ಚಿತವಾಗಿರುವ ಆತಂಕದ ಕಾಲ.
ಸಾಲ ಪಡೆದರೂ ಕೂಡ ನಾಳೆ ತೀರಿಸಲು ಆಸರೆಯಾದ ವೃತ್ತಿಯು ಇರುತ್ತದೆಯೇ ಎಂಬ ಖಾತ್ರಿಯೇ ಬಹಳ ಮಂದಿಗೆ ಇಲ್ಲವಾಗಿದೆ. ಅಷ್ಟು ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತಿದೆ. ಸ್ವಂತ ವ್ಯಾಪಾರ ಶುರು ಮಾಡಿದರೂ, ಜನರನ್ನು ಅಂಗಡಿಗಳತ್ತ ಸೆಳೆಯುವುದು ಸವಾಲಾಗಿಯೇ ಉಳಿದಿದೆ.
ಹಾಗಾಗಿ ಸಾಲ ಪಡೆಯಲು ಮನಸ್ಸಿರುವವರು ಎಚ್ಚರಿಕೆ ವಹಿಸಬೇಕಿರುವ ಅಂಶಗಳು ಹೀಗಿವೆ.
ಮೊದಲನೇಯದು, ಒಳ್ಳೆಯ ಸಿಬಿಲ್ ಸ್ಕೋರ್ ನಿರ್ವಹಿಸಿ. ಅತ್ಯಂತ ಕಡಿಮೆ ಬಡ್ಡಿ ನೀಡುತ್ತಿರುವ ಅಧಿಕೃತ ಬ್ಯಾಂಕ್ ಅಥವಾ ನೋಂದಾಯಿತ ಹಣಕಾಸು ಸಂಸ್ಥೆಗಳಿಂದಲೇ ಸಾಲ ಪಡೆಯಿರಿ. ಸಾಲ ಮಂಜೂರಾತಿಗೆ ಸೇವಾ ಶುಲ್ಕದ ರೂಪದಲ್ಲಿ ನಿಮ್ಮ ಹಣದಿಂದಲೇ ಕಡಿತಗೊಳ್ಳುವ ಮೊತ್ತದ ಮೇಲೆ ನಿಗಾ ಇರಿಸಿ. ಸಾಲ ಪಡೆಯುವ ಮುನ್ನ, ಅದನ್ನು ಹಿಂದಿರುಗಿಸುವ ಬಗ್ಗೆ ಸ್ಪಷ್ಟವಾದ ಯೋಜನೆ ರೂಪಿಸಿಕೊಳ್ಳಿರಿ.