
ದಾವಣಗೆರೆ: ಕೋರ್ಟ್ ಆದೇಶದಂತೆ ಡಿಎನ್ಎ ಪರೀಕ್ಷೆಗಾಗಿ ಹೂತಿದ್ದ ಶವವನ್ನು ಮಂಗಳವಾರ ಹೊರಗೆ ತೆಗೆದು ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಉಪ ವಿಭಾಗಾಧಿಕಾರಿ ಹುಲ್ಮನೆ ತಿಮ್ಮಣ್ಣನವರ ಸಮ್ಮುಖದಲ್ಲಿ ಸಂತೆಬೆನ್ನೂರು ಠಾಣೆ ಪೊಲೀಸರು ದಾವಣಗೆರೆ ಎಫ್ಎಸ್ಎಲ್ ತಜ್ಞರು, ಚಿಗಟೇರಿ ಆಸ್ಪತ್ರೆ ವೈದ್ಯರ ಸಮಕ್ಷಮದಲ್ಲಿ ಸೂಳೆಕೆರೆ ಸಮೀಪ ಹೂತಿದ್ದ ಶವ ಜೆಸಿಬಿ ಮೂಲಕ ಹೊರ ತೆಗೆಯಲಾಗಿದೆ.
ಸುಮಾರು 40 ವರ್ಷ ವಯಸ್ಸಿನ ಅನಾಮಧೇಯ ಪುರುಷನ ಶವ ಭದ್ರ ನಾಲೆ ಮೂಲಕ ಸೂಳೆಕೆರೆ ತಲುಪಿತ್ತು. ಕೊಳೆತ ಸ್ಥಿತಿಯಲ್ಲಿ ಗುರುತಿಸಲಾಗದರೀತಿಯಲ್ಲಿದ್ದ ಶವ ಹೂಳಲಾಗಿತ್ತು. ಕೋರ್ಟ್ ಆದೇಶದಂತೆ ಡಿಎನ್ಎ ಪರೀಕ್ಷೆಗಾಗಿ ಶವ ಹೊರತೆಗೆಯಲಾಗಿದೆ.