ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಶೌಚಾಲಯ ಆರಂಭ 30-08-2021 9:17AM IST / No Comments / Posted In: Latest News, India, Live News ತನ್ನ ಸ್ಟೇಷನ್‍ಗಳಲ್ಲಿರುವ ಶೌಚಾಲಯಗಳು ಪುರುಷರು ಮತ್ತು ಹೆಂಗಸರಿಗೆ ಮಾತ್ರವೇ ಸೀಮಿತವಾಗಿದ್ದು, ತೃತೀಯ ಲಿಂಗಿಗಳು ಕೂಡ ನಗರದಲ್ಲಿ ಹೆಚ್ಚಿದ್ದು ಮೆಟ್ರೋ ಪ್ರಯಾಣ ಮಾಡುವಾಗ ಅನಾನುಕೂಲತೆ ಉಂಟಾಗಬಾರದೆಂದು ದೆಹಲಿ ಮೆಟ್ರೋ ರೈಲು ಮಂಡಳಿ ವಿಶೇಷ ಹೆಜ್ಜೆಯನ್ನು ಇರಿಸಿದೆ. ತೃತೀಯ ಲಿಂಗಿಗಳಿಗಾಗಿಯೇ ಪ್ರತ್ಯೇಕವಾದ ಶೌಚಾಲಯವನ್ನು ತನ್ನ ನಿಲ್ದಾಣಗಳಲ್ಲಿ ನಿರ್ಮಿಸಿ, ಬಳಕೆಗೆ ಅನುಕೂಲ ಕಲ್ಪಿಸಿದೆ. ಇನ್ನೊಂದು, ವಿಶೇಷವೆಂದರೆ ಇದರ ಜತೆಗೆ ವಿಕಲಾಂಗರು ಬಳಸಲು ಕೂಡ ವಿಶೇಷ ವ್ಯವಸ್ಥೆಯನ್ನು ಶೌಚಾಲಯಗಳಲ್ಲಿ ಕಲ್ಪಿಸಲಾಗಿರುವುದು. ಒಟ್ಟು 347 ಸ್ಟೇಷನ್‍ಗಳಲ್ಲಿ ತೃತೀಯ ಲಿಂಗಿಗಳು ಹಾಗೂ ವಿಕಲಾಂಗರಿಗೆ ಮೀಸಲಾದ ಶೌಚಾಲಯಗಳನ್ನು ದೆಹಲಿ ಮೆಟ್ರೋ ನಿರ್ಮಿಸಿದೆ. GOOD NEWS: ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರ ಸೆಪ್ಟೆಂಬರ್ ನಿಂದ ಆರಂಭ ಇದರ ಹೊರತಾಗಿ ಕೆಲವೊಬ್ಬ ತೃತೀಯ ಲಿಂಗಿಗಳು, ಪುರುಷ ಅಥವಾ ಮಹಿಳಾ ಶೌಚಾಲಯಗಳನ್ನೇ ಬಳಸಲು ಮುಂದಾದರೆ ಅದಕ್ಕೂ ಕೂಡ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. To ensure that transgender passengers travelling by the Delhi Metro get access to toilets at stations, DMRC has made the provision of allowing them access to separate toilets, which were meant for Divyanjans. To read more about this initiative click here: https://t.co/0IhtiCEazK pic.twitter.com/yWjUAWEg42 — Delhi Metro Rail Corporation (@OfficialDMRC) August 29, 2021