alex Certify BIG NEWS: ಭೀಕರ ರಸ್ತೆ ಅಪಘಾತ; ಡಿಎಂಕೆ ಸಂಸದನ ಪುತ್ರ ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೀಕರ ರಸ್ತೆ ಅಪಘಾತ; ಡಿಎಂಕೆ ಸಂಸದನ ಪುತ್ರ ದುರ್ಮರಣ

ಚೆನ್ನೈ: ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಎನ್ ಆರ್ ಇಳಂಗೋವನ್ ಪುತ್ರ 22 ವರ್ಷದ ರಾಕೇಶ್ ಮೃತಪಟ್ಟಿದ್ದಾರೆ.

ಸಚಿವರ ಪುತ್ರ ರಾಕೇಶ್ ಇನ್ನೋರ್ವ ವ್ಯಕ್ತಿಯೊಂದಿಗೆ ಪುದಿಚೆರಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ಪ್ರಯಾಣಿಸುತ್ತಿದ್ದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು, ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ.

ಹಿರಿಯ ವಕೀಲರಾಗಿರುವ ಎನ್ ಆರ್ ಇಳಂಗೋವನ್ ಅವರು 2020 ರಲ್ಲಿ ತಮಿಳುನಾಡಿನಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...