ಡಿಎಂಕೆ ಸಂಸದೆ ಕನಿಮೊಳಿ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿದ ವೇಳೆ ಅವರು ಟಿಕೆಟ್ ಪಡೆದಿದ್ದರೂ ಸಹ ತಮ್ಮಂದಿಗಿದ್ದ ಮಹಿಳಾ ಕಂಡಕ್ಟರ್ ಅಗೌರವ ತೋರಿದ್ದಲ್ಲದೆ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ತಮಿಳುನಾಡಿನ ಮಹಿಳಾ ಬಸ್ ಚಾಲಕಿ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರದಂದು ಬಸ್ ಚಾಲಕಿ ಶರ್ಮಿಳಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಕನಿಮೊಳಿಯವರು ನಾನು ಚಲಾಯಿಸುತ್ತಿದ್ದ ಬಸ್ ಹತ್ತಿದ್ದು ಗಾಂಧಿಪುರಂನಿಂದ ಪೀಲಮೆಡುವರೆಗೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ ಅವರು ಟಿಕೆಟ್ ಪಡೆದಿದ್ದರೂ ಸಹ ಕಂಡಕ್ಟರ್ ಅವಮಾನಕರ ರೀತಿಯಲ್ಲಿ ವರ್ತಿಸಿದ್ದರು ಎಂದಿದ್ದಾರೆ.
ಹೀಗಾಗಿ ನನ್ನ ಮತ್ತು ಕಂಡಕ್ಟರ್ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಕನಿಮೊಳಿ ಅವರ ಪ್ರಯಾಣ ಕುರಿತಂತೆ ಆಡಳಿತ ಮಂಡಳಿಗೂ ಸಹ ತಿಳಿಸಿದ್ದೆ ಎಂದಿರುವ ಶರ್ಮಿಳಾ, ಆದರೆ ಪ್ರಚಾರದ ಸಲುವಾಗಿ ಪ್ರಮುಖ ವ್ಯಕ್ತಿಗಳು ಬಸ್ ನಲ್ಲಿ ಪ್ರಯಾಣಿಸುವಂತೆ ಆಹ್ವಾನಿಸುತ್ತಾರೆ ಎಂದು ಆಡಳಿತ ಮಂಡಳಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ನನ್ನ ಕನಸಿನ ಉದ್ಯೋಗವನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.