alex Certify ‘ಆತ್ಮನಿರ್ಭರ್​’ ಪದ ಉಚ್ಛರಿಸಲು ಕಷ್ಟವೆಂದ ಡಿಎಂಕೆ ಸಂಸದೆ..! ಸಂಸತ್ತಿನಲ್ಲಿ ತಮಿಳಿನಲ್ಲೇ ಭಾಷಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆತ್ಮನಿರ್ಭರ್​’ ಪದ ಉಚ್ಛರಿಸಲು ಕಷ್ಟವೆಂದ ಡಿಎಂಕೆ ಸಂಸದೆ..! ಸಂಸತ್ತಿನಲ್ಲಿ ತಮಿಳಿನಲ್ಲೇ ಭಾಷಣ

ತಮಿಳುನಾಡಿನ ಡಿಎಂಕೆ ಸಂಸದೆ ಕನಿಮೋಳಿ ಸಂಸತ್ತಿನಲ್ಲಿ ಹವಾಮಾನ ಬದಲಾವಣೆ ವಿಚಾರದ ಕುರಿತು ಮಾತನಾಡುತ್ತಿರುವ ವೇಳೆಯಲ್ಲಿ ಆತ್ಮ ನಿರ್ಭರ್​ ಭಾರತ್​ ಎಂಬ ಪದವನ್ನು ಉಚ್ಛರಿಸಲು ತೊಂದರೆ ಅನುಭವಿಸಿದ್ದಾರೆ.

ಆತ್ಮನಿರ್ಭರ್​ ಭಾರತ್​ ಪದ ಉಚ್ಛರಿಸಲು ಕನಿಮೋಳಿ ತಡಕಾಡಿದ ವೇಳೆಯಲ್ಲಿ ಸಂಸತ್​​ನ ಇತರೆ ಸದಸ್ಯರು ಜೋರಾಗಿ ಆತ್ಮನಿರ್ಭರ್​ ಭಾರತ್​ ಎಂದು ಹೇಳಿದ್ದಾರೆ.

ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಕನಿಮೋಳಿ, ನೀವು ಇಂಗ್ಲೀಷ್​ನಲ್ಲೋ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಈ ಹೆಸರನ್ನು ಇಟ್ಟರೆ ನಮಗೆ ಉಚ್ಛರಿಸಲು ಸುಲಭವಾಗುತ್ತೆ ಎಂದು ಹೇಳಿದ್ದಾರೆ.

ಆತ್ಮನಿರ್ಭರ್​ ಭಾರತ್​ ಎಂದು ಉಚ್ಛರಿಸಲು ಕಷ್ಟವಾದ ಬಳಿಕ ಸಂಸದೆ ಕನಿಮೋಳಿ ತಮಿಳಿನಲ್ಲಿಯೇ ಸಂಸತ್ತಿನಲ್ಲಿ ಮಾತನಾಡಿದ್ದು, ಇದನ್ನು ನೋಡಿದ ನೆಟ್ಟಿಗರು ಕನಿಮೋಳಿ ಅವರಿಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...