ನವದೆಹಲಿ: ಕಾಂಗ್ರೆಸ್ನಿಂದ ಶುರುವಾಗಿರುವ ಭಾರತ್ ಜೋಡೋ ಯಾತ್ರೆಗೆ ಇದಾಗಲೇ ಹಲವರು ಕೈಜೋಡಿಸಿದ್ದು, ಇದೀಗ ಯಾತ್ರೆಯಲ್ಲಿ ಡಿಎಂಕೆ ನಾಯಕಿ, ಸಂಸದೆ ಕನಿಮೋಳಿ ಭಾಗವಹಿಸಿದ್ದಾರೆ.
ಇಂದು ಹರಿಯಾಣದಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಗೆ ಕನಿಮೋಳಿ ಕೈಜೋಡಿಸಿದ್ದಾರೆ. ಕನಿಮೋಳಿ ಅವರು ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ಜನರತ್ತ ನಗುತ್ತಲೇ ಕೈಬೀಸುತ್ತಿರುವ ಫೋಟೋಗಳನ್ನು ‘ಭಾರತ್ ಜೋಡೋ’ ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತ್ ಜೋಡೋ ಯಾತ್ರೆಗೆ ಜೊತೆಯಾಗಿರುವ ಕನಿಮೋಳಿ ಅವರಿಗೆ ಸ್ವಾಗತವೆಂದು ಟ್ವೀಟ್ ಮಾಡಲಾಗಿದೆ.
ಡಿ.24ರಂದು ದೆಹಲಿಯನ್ನು ಯಾತ್ರೆ ತಲುಪಲಿದೆ. ದೆಹಲಿಯಲ್ಲಿ ಪ್ರಮುಖ ಮಾರ್ಗಗಳಲ್ಲಿ ಸಾಗುವ ಯಾತ್ರೆಯು ಕೆಂಪು ಕೋಟೆಗೆ ತಲುಪಲಿದೆ. ಅಲ್ಲಿಂದ ರಾಜ್ಘಾಟ್ಗೆ ತೆರಳಲಿದೆ. ರಾಹುಲ್ ಗಾಂಧಿ ಅವರು ರಾಷ್ಟ್ರ ನಾಯಕರ ಸಮಾಧಿಗಳಿಗೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ ಎಂದು ಪಕ್ಷದ ಅಧಿಕೃತ ಮೂಲಗಳು ಹೇಳಿವೆ.