alex Certify BIG BREAKING: ಸಿಎಂ ಕ್ರಾಂತಿಕಾರಿ ನಿರ್ಧಾರ, ವಿವಿಧ ಜಾತಿಯವರನ್ನು ಅರ್ಚಕರಾಗಿ ನೇಮಿಸಿದ ತಮಿಳುನಾಡು ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸಿಎಂ ಕ್ರಾಂತಿಕಾರಿ ನಿರ್ಧಾರ, ವಿವಿಧ ಜಾತಿಯವರನ್ನು ಅರ್ಚಕರಾಗಿ ನೇಮಿಸಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡಿನ ಡಿಎಂಕೆ ಆಡಳಿತಾರೂಢ ಸರ್ಕಾರ ಎಲ್ಲಾ ಜಾತಿಯ ತರಬೇತಿ ಪಡೆದ ಆಕಾಂಕ್ಷಿಗಳನ್ನು ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ.

ಎಲ್ಲಾ ಜಾತಿಗೆ ಸೇರಿದ ಆಕಾಂಕ್ಷಿಗಳನ್ನು ದೇವಾಲಯದ ಅರ್ಚಕರನ್ನಾಗಿ ನೇಮಿಸುವ ತನ್ನ ಚುನಾವಣಾ ಪ್ರಣಾಳಿಕೆ ಭರವಸೆಯನ್ನು ಅನುಷ್ಠಾನಗೊಳಿಸಿದ ಡಿಎಂಕೆ ಸರ್ಕಾರವು ಶನಿವಾರ ವಿವಿಧ ಸಮುದಾಯಗಳ 24 ತರಬೇತಿ ಪಡೆದ ‘ಅರ್ಚಕರನ್ನು’ ದೇವಾಲಯಗಳಲ್ಲಿ ಅರ್ಚಕರನ್ನಾಗಿ ನೇಮಿಸಿದೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ನೇಮಕಾತಿ ಆದೇಶಗಳನ್ನು 75 ಜನರಿಗೆ ನೀಡಿದ್ದು, ವಿವಿಧ ವರ್ಗಗಳ ಅಡಿಯಲ್ಲಿ 208 ಹುದ್ದೆಗಳಿಗೆ ನೇಮಕಾತಿ ಮಾಡಿದ್ದಾರೆ. ನೇಮಕಾತಿಯಲ್ಲಿ ಔಪಚಾರಿಕವಾಗಿ ತರಬೇತಿ ಪೂರ್ಣಗೊಳಿಸಿದ ವಿವಿಧ ಜಾತಿಯ 24 ಅರ್ಚಕರೂ ಸೇರಿದ್ದಾರೆ.

24 ಮಂದಿ ಆಕಾಂಕ್ಷಿಗಳು ಹಿಂದೂ ದೇವಾಲಯಗಳಲ್ಲಿ ಅರ್ಚಕರಾಗಲು ತರಬೇತಿ ಪಡೆದಿದ್ದಾರೆ, ಇತರ 34 ಮಂದಿ ಇತರ ‘ಪಾಠ ಶಾಲೆಗಳಲ್ಲಿ’ ಅರ್ಚಕ ತರಬೇತಿ ಪೂರ್ಣಗೊಳಿಸಿದ್ದಾರೆ.

208 ನೇಮಕಾತಿಗಳಲ್ಲಿ ಭಟ್ಟಾಚಾರ್ಯರು, ಒಡುವರು, ಪೂಜಾರಿಗಳು, ತಾಂತ್ರಿಕರು ಮತ್ತು ಕಚೇರಿ ಸಹಾಯಕರು ಸೇರಿದ್ದು, ಸೂಕ್ತ ನೇಮಕಾತಿ ಪ್ರಕ್ರಿಯೆಯ ನಂತರ ನೇಮಕಗೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

ಇಂದು ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಅಧಿಕಾರ ಸ್ವೀಕರಿಸಿದ 100 ನೇ ದಿನವನ್ನು ಆಚರಿಸಿದೆ. ಎಲ್ಲಾ ಜಾತಿಗಳಿಗೆ ಸೇರಿದವರನ್ನು ದೇವಸ್ಥಾನಗಳಲ್ಲಿ ಅರ್ಚಕರಾಗಿ ನೇಮಿಸುವುದಾಗಿ ಚುನಾವಣೆಗೆ ಮೊದಲು ನೀಡಿದ ಭರವಸೆ ಈಡೇರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...