
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ, ವೀಲಿಂಗ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘಿಸಿದ 815 ಜನರ ಡಿಎಲ್ ಅಮಾನತು ಮಾಡಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ ಸವಾರರಿಗೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಾರಿಗೆ ಇಲಾಖೆ ಜೊತೆ ಸೇರಿ ಸವಾರರ ಚಾಲನಾ ಪರವಾನಿಗೆ ಅಮಾನತು ಮಾಡಲಾಗಿದೆ.
ಉತ್ತರ ವಿಭಾಗದ ವಿವಿಧ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಸಂಬಂಧ 745, ವೀಲಿಂಗ್ ಮಾಡಿದ 6, ಅಪಘಾತ ಸಂಬಂಧ 54, ಹಿಟ್ ಅಂಡ್ ರನ್ 10 ಪ್ರಕರಣ ಸೇರಿ 815 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಸವಾರರ ಪೂರ್ವಾಪರ ಬಗ್ಗೆ ಪೊಲೀಸರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಡಿಎಲ್ ಅಮಾನತುಪಡಿಸುವಂತೆ ಶಿಫಾರಸು ಮಾಡಿದ್ದರು.
ಪೊಲೀಸರ ಶಿಫಾರಸಿನ ಅನ್ವಯ ಸಾರಿಗೆ ಇಲಾಖೆ 2024ರ ಜನವರಿಯಿಂದ 2025ನೇ ಫೆಬ್ರವರಿ ಅಂತ್ಯದವರೆಗೆ 815 ವಾಹನ ಸವಾರರ ಡಿಎಲ್ ಅಮಾನತು ಮಾಡಿದೆ.