ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಸ್ತಿ ಮೌಲ್ಯ 1,214.93 ಕೋಟಿ ರೂಪಾಯಿ. ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 1,415.95 ಕೋಟಿ ರೂ. ಆಗಿದೆ. ಐದು ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಆಸ್ತಿ 595 ಕೋಟಿ ರೂ. ಏರಿಕೆಯಾಗಿದೆ.
2018ರಲ್ಲಿ 619.75 ಕೋಟಿ ರೂ. ಆಸ್ತಿ ಇರುವುದಾಗಿ ಡಿಕೆಶಿ ಘೋಷಣೆ ಮಾಡಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 595.18 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ. ಡಿಕೆಶಿ ಬಳಿ 9 ಲಕ್ಷ ರೂ. ರೋಲೆಕ್ಸ್ ವಾಚ್ ಮತ್ತು 23.90 ಲಕ್ಷ ರೂ. ಹ್ಯೂಬ್ಲೆಟ್ ವಾಚ್ ಇದೆ.
ಚಿನ್ನಾಭರಣ, ಬೆಳ್ಳಿ, ವಜ್ರ, ಮಾಣಿಕ್ಯ, ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡಗಳನ್ನು ಡಿಕೆಶಿ ಹೊಂದಿದ್ದಾರೆ. ಇದರೊಂದಿಗೆ 226.41 ಕೋಟಿ ರೂ. ಸಾಲ ಇರುವುದಾಗಿ ನಾಮಪತ್ರ ಸಲ್ಲಿಕೆ ವೇಳೆ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಬಳಿ 133.68 ಕೋಟಿ ರೂ., ಪುತ್ರ ಮತ್ತು ಪುತ್ರಿಯ ಹೆಸರಲ್ಲಿ 68 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಡಿಕೆಶಿ ಬಳಿ 4.85 ಲಕ್ಷ ನಗದು, ಬ್ಯಾಂಕು ಖಾತೆಗಳಲ್ಲಿ 14.67 ಕೋಟಿ ರೂ. ಇದೆ ಎಂದು ಹೇಳಲಾಗಿದೆ.