ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದ್ದು, ಇಂದು 5 ನೇ ದಿನಕ್ಕೆ ಕಾಲಿಟ್ಟಿದೆ. ಕಾನೂನು ತಜ್ಞರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ.
ಪಾದಯಾತ್ರೆಗೆ ಹೈಕೋರ್ಟ್ ತಡೆ ನೀಡಿದರೆ, ಮುಂದಿನ ನಡೆಯ ಬಗ್ಗೆ ತಜ್ಞರ ಜೊತೆಗೆ ಡಿಕೆಶಿ ಚರ್ಚೆ ನಡೆಸಿದ್ದಾರೆ. ಒಬ್ಬರೇ ನಡೆದುಕೊಂಡು ಹೋದರೆ ಏನಾದರೂ ಸಮಸ್ಯೆಯಾಗುತ್ತದೆಯೇ ಎಂದು ತಜ್ಞರೊಂದಿಗೆ ಡಿಕೆಶಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ, ನೀವು ನಡೆದರೆ ಜನ ಸೇರುತ್ತಾರೆ. ಆಗ ಸಮಸ್ಯೆಯಾಗುತ್ತದೆ ಎಂದು ಅವರಿಗೆ ಸಲಹೆ ನೀಡಲಾಗಿದ್ದು, ಜನ ಸೇರುವುದು ಬೇಡ, ನಾನು ಸಿದ್ದರಾಮಯ್ಯ ನಡೆಯುತ್ತೇವೆ. ಶಾಸಕರು ಬಂದರೆ ಮಾಸ್ಕ್ ಧರಿಸಿ ಅಂತರದಲ್ಲಿ ನಡೆಯುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆನ್ನಲಾಗಿದೆ.
ನಡೆದುಕೊಂಡು ಹೋಗಲು ಕಾನೂನಿನಲ್ಲಿ ಯಾವುದೇ ತೊಡಕು ಇಲ್ಲ. ಕೋರ್ಟ್ ತಡೆ ನೀಡಿದರೆ ಒಬ್ಬನೇ ನಡೆಯುತ್ತೇನೆ. ಈ ಬಗ್ಗೆ ನಾಯಕರ ಜೊತೆ ಚರ್ಚಿಸೋಣ ಎಂದು ಡಿಕೆಶಿ ತಿಳಿಸಿದ್ದಾರೆನ್ನಲಾಗಿದೆ.
ಸರ್ಕಾರದಿಂದ ಪಾದಯಾತ್ರೆ ತಡೆಯಲು ಕ್ರಮ ಕೈಗೊಂಡಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ಸ್ಥಗಿತಗೊಳಿಸುವುದಿಲ್ಲ ಎಂದು ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹೇಳಿದ್ದಾರೆ. ಸರ್ಕಾರ ಬ್ರೇಕ್ ಹಾಕಿದ್ರೆ ಡಿ.ಕೆ. ಶಿವಕುಮಾರ್ ಒಬ್ಬರೇ ಪಾದಯಾತ್ರೆ ಮುಂದುವರೆಸಬಹುದೆಂದು ಹೇಳಲಾಗಿದೆ.