ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿರುವುದು ದುಃಖದ ಸುದ್ದಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಉಪಕಾರ ಸ್ಮರಣೆ ಇಲ್ಲದಿರುವುದಕ್ಕೆ ಇದು ಉದಾಹರಣೆಯಾಗಿದೆ. ದೇಶ ಕಷ್ಟದ ಕಾಲದಲ್ಲಿರುವಾಗ ಗುಲಾಂ ನಬಿ ಆಜಾದ್ ಹೀಗೆ ಮಾಡಬಾರದಿತ್ತು ಎಂದರು.
ದೇಶಕ್ಕಾಗಿ ಹೋರಾಟ ಮಾಡುವ ಬಗ್ಗೆ ಉದಯಪುರದಲ್ಲಿ 600 ಜನ ನಾಯಕರು ಸೇರಿ ಚರ್ಚೆ ಮಾಡುವಾಗ ಅವರೂ ಇದ್ದರು. 50 ವರ್ಷಗಳ ಕಾಲ ನಿರ್ಧಾರ ಕೈಗೊಳ್ಳುವ ತಂಡದಲ್ಲಿ ಗುಲಾಂನಬಿ ಆಜಾದ್ ಅವರು ಇದ್ದರು. ಅವರಿಗೆ ಕಾಂಗ್ರೆಸ್ ಪಕ್ಷ 40 ವರ್ಷಗಳ ಕಾಲ ಅಧಿಕಾರ ನೀಡಿತ್ತು. ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದು ಹೆತ್ತ ತಾಯಿಗೆ ಮಾಡಿದ ದ್ರೋಹ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.