ಬೆಂಗಳೂರು: ನನ್ನ ವಿರುದ್ಧ ಎಫ್ಐಆರ್ ದಾಖಲು ಮಾಡಿದವರ ವಿರುದ್ಧ ಕಾನೂನು ಹೋರಾಟ ಮುಂದುವರೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಸಂಸ್ಥೆಗಳಿಗೆ, ಸ್ನೇಹಿತರಿಗೆ, ಎಲ್ಲೆಲ್ಲಿ ವ್ಯವಹಾರ ಮಾಡಿದ್ದೇನೋ ಅಲ್ಲೆಲ್ಲ ಸಿಬಿಐನವರು ನೋಟಿಸ್ ಕೊಟ್ಟಿದ್ದಾರೆ. ಸರ್ಕಾರ ವಾಪಸ್ ಪಡೆದ ನಂತರ ಯಾಕೆ ನೋಟಿಸ್ ಕೊಡುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಕೇಸ್ ವಿತ್ ಡ್ರಾ ಮಾಡಿದ ನಂತರ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದ್ದರೂ ಇದರ ಉದ್ದೇಶ ಏನೆಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ತನಿಖೆಯ ಪೂರ್ವಾನುಮತಿಯನ್ನು ಹಿಂಪಡೆದ ನಂತರ ಸರ್ಕಾರ ಲೋಕಾಯುಕ್ತಕ್ಕೆ ತನಿಖೆಯ ಜವಾಬ್ದಾರಿ ನೀಡಿದ್ದು, ಪೊಲೀಸರು ಫೆಬ್ರವರಿ 8ರಂದು ಎಫ್ಐಆರ್ ದಾಖಲಿಸಿದ್ದಾರೆ. ಒಂದೇ ಪ್ರಕರಣಕ್ಕೆ ಮತ್ತೊಂದು ಎಫ್ಐಆರ್ ದಾಖಲು ಸಾಧ್ಯವಿಲ್ಲ. ಹೀಗಿರುವಾಗ ಲೋಕಾಯುಕ್ತಕ್ಕೆ ಕೊಟ್ಟಿರುವ ಆದೇಶ ಸರಿ ಇಲ್ಲ ಎಂದು ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ.