ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ ಮತ್ತೆ ಇಡಿ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ದೆಹಲಿಯ ಇಡಿ ವಿಶೇಷ ಕೋರ್ಟ್ ನಲ್ಲಿ ಡಿಕೆಶಿ ವಿಚಾರಣೆ ನಡೆಯಲಿದೆ.
ತನಿಖೆ ನಡೆಸಿದ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಹಿನ್ನಲೆಯಲ್ಲಿ ಡಿಕೆಶಿ ಸೇರಿದಂತೆ ಐವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಸಮನ್ಸ್ ಹಿನ್ನೆಲೆಯಲ್ಲಿ ಇಂದು ಡಿಕೆಶಿ ಸೇರಿದಂತೆ ಐವರ ವಿಚಾರಣೆ ನಡೆಯಲಿದ್ದು, ಮೊದಲ ದಿನದ ವಿಚಾರಣೆಯಾಘಿರುವ ಹಿನ್ನಲೆ ಬೇಲ್ ಪರಿಶೀಲಿಸಲಾಗುತ್ತದೆ.
ಹೈಕೋರ್ಟ್ ನಿಂದ ಈ ಹಿಂದೆ ಪಡೆದುಕೊಂಡ ಜಾಮೀನು ಪರಿಶೀಲಿಸಲಾಗುವುದು. ಇದುವರೆಗೂ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ಲಭ್ಯವಾಗದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲು ವಕೀಲರು ಮನವಿ ಮಾಡುವ ಸಾಧ್ಯತೆ ಇದೆ.