ದಾವಣಗೆರೆ: ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ.
ನಾವು ಅಧಿವೇಶನ ಬಿಟ್ಟು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಐದು ನಿಮಿಷ ತಾಳ್ಮೆಯಿಂದ ಭಾಷಣ ಕೇಳಲು ನಿಮಗೆ ಆಗುವುದಿಲ್ಲವೇ? ನೀವು ಸುಮ್ಮನಿದ್ದರೆ ನಾನು ಮಾತನಾಡುತ್ತೇನೆ. ಇಲ್ಲದಿದ್ದರೆ ಹೋಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆದಿದೆ. ಕಿಕ್ಕಿರಿದು ಸೇರಿದ್ದ ಜನ ಡಿ.ಕೆ. ಶಿವಕುಮಾರ್ ಮಾತನಾಡುವ ವೇಳೆ ಗಲಾಟೆ ಮಾಡಿದ್ದರಿಂದ ಗರಂ ಆದ ಅವರು, ಕೆಲವರನ್ನು ಅಲ್ಲಿಂದ ಹೊರಗೆ ಕಳುಹಿಸಿದ್ದಾರೆ.