ಚಾಮರಾಜನಗರ: ಡಿಜೆ ಹಾಡಿಗೆ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಡ್ಯಾನ್ಸ್ ಮಾಡುವಾಗ ಹೃದಯಘಾತದಿಂದ 42 ವರ್ಷದ ಬಾಬು ಸಾವನ್ನಪ್ಪಿದ್ದಾರೆ. ದೇವರ ಉತ್ಸವದ ವೇಳೆ ಡ್ಯಾನ್ಸ್ ಮಾಡುವಾಗ ಘಟನೆ ನಡೆದಿದೆ.
ಗ್ರಾಮದಲ್ಲಿ ಗೌರಿ ವಿಸರ್ಜನೆ ಅಂಗವಾಗಿ ಕಲ್ಯಾಣ ಬಸವೇಶ್ವರ ಉತ್ಸವ ಆಯೋಜಿಸಲಾಗಿತ್ತು. ಉತ್ಸವದ ವೇಳೆ ಡಿಜೆ ಹಾಕಿಕೊಂಡು ಯುವಕರು ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಬಾಬು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.