
ಅಮೇರಿಕಾದ ನ್ಯೂಯಾರ್ಕ್ ನ ಸ್ಥಳೀಯಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ದೀಪಾವಳಿಗೆ ಇನ್ನು ಮುಂದೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಲಾಗಿದೆ. ಇದನ್ನು ಐತಿಹಾಸಿಕ ತೀರ್ಮಾನ ಎಂದು ಕೌನ್ಸಿಲ್ ಸದಸ್ಯೆ ಲಿಂಡಾ ಲೀ ಬಣ್ಣಿಸಿದ್ದಾರೆ.
ಮತ್ತೊಬ್ಬ ಸದಸ್ಯೆ ಜೆನ್ನಿಫರ್ ರಾಜಕುಮಾರ್ ಕೂಡ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಲಿಂಡಾ ಲೀ ಸಹಕಾರದಿಂದ ಇದು ಸಾಕಾರಗೊಂಡಿದೆ. ಇದಕ್ಕೆ ಬೆಂಬಲಿಸಿದ ಎಲ್ಲ ಸದಸ್ಯರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ದೀಪಾವಳಿ ಹಬ್ಬವನ್ನು ಈಗಾಗಲೇ ಅಮೆರಿಕದ ಶ್ವೇತ ಭವನದಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಸಂದರ್ಭದಲ್ಲಿ ಭಾರತ ಸಮುದಾಯದವರನ್ನು ಅಮೆರಿಕಾ ಅಧ್ಯಕ್ಷರು ಆಹ್ವಾನಿಸುತ್ತಾರೆ. ಇದೀಗ ನ್ಯೂಯಾರ್ಕ್ ಕೌನ್ಸಿಲ್ ದೀಪಾವಳಿಗೆ ಶಾಲೆಗಳಿಗೆ ರಜೆ ನೀಡುವ ತೀರ್ಮಾನವನ್ನು ಕೈಗೊಂಡಿದೆ.