ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ಉದ್ಘಾಟನೆಗೆ ಕೆಲವೇ ಗಂಟೆಗಳು ಬಾಕಿ ಇದೆ. 500 ವರ್ಷಗಳ ನಂತರ ಇಂದು ರಾಮಮಂದಿರದ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ನಡೆಯಲಿದ್ದು, ದೇಶದ ವಿವಿಧ ಮೂಲೆಗಳಲ್ಲಿ ಈಗಾಗಲೇ ಮುಂಜಾನೆಯಿಂದ ಆಚರಣೆಗಳು ಪ್ರಾರಂಭವಾಗಿವೆ.
ಸಾಮಾಜಿಕ ಮಾಧ್ಯಮದಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದ ಕುರಿತು ಮಿಮ್ಸ್ ಗಳು ವೈರಲ್ ಆಗುತ್ತಿವೆ. ಪ್ರಾಣಪ್ರತಿಷ್ಠಾಪನೆ ‘ಜನವರಿಯ ದೀಪಾವಳಿ’ ಎಂದು ಕರೆಯಲಾಗುತ್ತಿದೆ.
ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯನ್ನು ಆಚರಿಸುವ ಮೂಲಕ ಭಾರತೀಯರು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ.