ದೀಪಾವಳಿ ಧನತ್ರಯೋದಶಿಯಿಂದ ಶುರುವಾಗುತ್ತದೆ. ಐದು ದಿನಗಳ ಕಾಲ ನಡೆಯುವ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ. ದೀಪಾವಳಿಯಲ್ಲಿ ದೀಪಕ್ಕೆ ಮಾತ್ರವಲ್ಲ ಪೊರಕೆಗೂ ವಿಶೇಷ ಮಹತ್ವವಿದೆ. ದೀಪಾವಳಿ ದಿನ ಅಥವಾ ಧನತ್ರಯೋದಶಿ ದಿನ ಪೊರಕೆ ಖರೀದಿ ಮಾಡ್ಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ದೀಪಾವಳಿ ದಿನ ಪೊರಕೆ ಖರೀದಿ ಮಾಡೋದ್ರಿಂದ ನೆಮ್ಮದಿ, ಸಂತೋಷ ಪ್ರಾಪ್ತಿಯಾಗುತ್ತದೆ. ತಾಯಿ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ಇದ್ರಿಂದ ಆರ್ಥಿಕ ವೃದ್ಧಿಯಾಗುತ್ತದೆ.
ದೀಪಾವಳಿ ದಿನ ಪೊರಕೆ ಖರೀದ ಮಾಡೋದು ಮಾತ್ರವಲ್ಲದೆ ಪೊರಕೆ ದಾನಕ್ಕೂ ವಿಶೇಷ ಮಹತ್ವವಿದೆ. ಆದ್ರೆ ಪೊರಕೆಯನ್ನು ಎಲ್ಲರಿಗೂ ದಾನ ಮಾಡುವಂತಿಲ್ಲ. ನೀವು ದೀಪಾವಳಿ ದಿನ ಪೊರಕೆ ದಾನ ಮಾಡ್ತಿದ್ದರೆ ಅದನ್ನು ದೇವಸ್ಥಾನಕ್ಕೆ ಅಥವಾ ದೇವರ ಜಾಗಕ್ಕೆ ಮಾತ್ರ ನೀಡಬೇಕು. ಹೊಸ ಪೊರಕೆಯನ್ನು ಮಾತ್ರ ದಾನವಾಗಿ ನೀಡಬೇಕು.
ದೀಪಾವಳಿ ದಿನ ದೇವಸ್ಥಾನಕ್ಕೆ ಪೊರಕೆ ನೀಡಿದ್ರೆ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ. ಎಲ್ಲ ಸಂಕಷ್ಟ ದೂರವಾಗುತ್ತದೆ. ನಿಮ್ಮ ಪೊರಕೆಯನ್ನು ಬಳಸಿ ದೇವರ ಜಾಗವನ್ನು ಸ್ವಚ್ಛಗೊಳಿಸಿದ್ರೆ ದೇವಸ್ಥಾನದಂತೆ ನಿಮ್ಮ ಜೀವನ ಕೂಡ ಮಿನುಗುತ್ತದೆ. ಎಲ್ಲ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳ ಬರುತ್ತವೆ.
ದೀಪಾವಳಿ ದಿನ ನೀವು ಹೊಸ ಪೊರಕೆಯನ್ನು ಖರೀದಿ ಮಾಡಿ ಮನೆಗೆ ತಂದಿದ್ದರೆ ಹಳೆ ಪೊರಕೆಯನ್ನು ಯಾವುದೇ ಕಾರಣಕ್ಕೂ ಅದೇ ದಿನ ಎಸೆಯಬೇಡಿ. ಹಾಗೆ ಮಾಡಿದಲ್ಲಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ನೀವು ದೀಪಾವಳಿ ಮರುದಿನ ಹಳೆ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬೇಕು.