ಹೈದರಾಬಾದ್: ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಸಾವನ್ನಪ್ಪಿದ್ದಾರೆ. ದೀಪಾವಳಿ ದಿನವೇ ದುರಂತ ನಡೆದಿದ್ದು, ಸ್ನೇಹಿತರು ಬರ್ತಡೇ ಪಾರ್ಟಿಗೆ ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ತೆಲಂಗಾಣದ ಮುಲುಗು ಸಮೀಪ ಗೋದಾವರಿ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸ್ನೇಹಿತರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಾಯವರವು ಪ್ರಕಾಶ(19), ಕಾರ್ತಿಕ್(19), ಕೆ. ಅನ್ವೇಶ್(19), ಎಸ್. ಶ್ರೀಕಾಂತ್(20) ಅವರು ಮೃತಪಟ್ಟವರು ಎಂದು ಗುರುತಿಸಲಾಗಿದೆ.
ವೆಂಕಟಾಪುರಂ ಗ್ರಾಮದ ರಂಗರಜಪುರಂ ಕಾಲೋನಿ ಬಳಿ ಗೋದಾವರಿ ನದಿಯ ಬಳಿ ಸ್ನೇಹಿತನ ಹುಟ್ಟುಹಬ್ಬ ಆಚರಣೆಗೆ 16 ಮಂದಿ ಯುವಕರು ತೆರಳಿದ್ದಾರೆ. ಈ ವೇಳೆ ನಾಲ್ವರು ನೀರುಪಾಲಾಗಿದ್ದಾರೆ. ಉಳಿದವರು ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೂ ರಕ್ಷಿಸುವ ಪ್ರಯತ್ನ ಫಲಿಸಲಿಲ್ಲ.
ನದಿಯಲ್ಲಿ ಮರಳು ತೆಗೆದಿದ್ದು, ಭಾರೀ ಆಳದ ಗುಂಡಿಗಳಿವೆ. ನದಿಯ ಆಳದ ಬಗ್ಗೆ ತಿಳಿಯದ ಯುವಕರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.