ಸಾಮಾನ್ಯವಾಗಿ ಶಿವನ ಪೂಜೆ ಮಾಡುವಾಗ ದೇವಿ ಪಾರ್ವತಿ, ವಿಷ್ಣುವನ್ನು ಪೂಜಿಸುವಾಗ ದೇವಿ ಲಕ್ಷ್ಮಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಪೂಜೆ ಮಾಡಿಯೇ ಮಾಡುತ್ತೇವೆ. ಹೀಗೆ ಮಾಡಿದಾಗಲೇ ಪೂಜೆ ಸಂಪೂರ್ಣವಾಗಿ ಫಲ ದೊರೆಯುತ್ತದೆ ಎಂಬ ನಂಬಿಕೆ ಬೇರೂರಿದೆ. ‘
ಆದರೆ ದೀಪಾವಳಿಯಲ್ಲಿ ಮಾತ್ರ ಲಕ್ಷ್ಮಿಯ ಜೊತೆ ವಿಷ್ಣುವಿನ ಪೂಜೆಯನ್ನು ಮಾಡಲೇಬಾರದು. ಇದಕ್ಕೆ ಪೌರಾಣಿಕ ಹಿನ್ನಲೆ ಇದೆ.
ನಟಿ ದಿಶಾ ಪಟಾನಿಯ ಬೀಚ್ ಫೋಟೋ ನೋಡಿ ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್..!
ದೀಪಾವಳಿಯಲ್ಲಿ ಹಣದ ಒಡತಿಯಾಗಿರುವ ಲಕ್ಷ್ಮಿಯ ಜೊತೆ ಗಣೇಶ, ಸರಸ್ವತಿ ಮತ್ತು ಕುಬೇರ ದೇವರ ಪೂಜೆ ಮಾಡುತ್ತಾರೆ. ಆದರೆ ವಿಷ್ಣುವಿನ ಪೂಜೆ ಮಾಡುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ವಿಷ್ಣು ಚಾತುರ್ಮಾಸದಲ್ಲಿರುತ್ತಾನೆ. ನಿದ್ರಾಸ್ಥಿತಿಯಲ್ಲಿ ಇರುತ್ತಾನೆ. ಹಾಗಾಗಿ ವಿಷ್ಣುವನ್ನು ಈ ಸಂದರ್ಭದಲ್ಲಿ ವಿಷ್ಣುವಿನ ಆವಾಹನೆ ಮಾಡಿ ದೇವರನ್ನು ಎಚ್ಚರಗೊಳಿಸಬಾರದು.
ದೀಪಾವಳಿ ನಂತರ ಕಾರ್ತೀಕ ಪೂರ್ಣಿಮೆಯ ದಿನ ಭಗವಂತ ವಿಷ್ಣು ಚಾತುರ್ಮಾಸದಿಂದ ಏಳುತ್ತಾನೆ. ಅಂದು ಅನೇಕ ಮಂದಿರಗಳಲ್ಲಿ ಅಲಂಕಾರ ಮಾಡಿ ವಿಷ್ಣುವಿನ ಪೂಜೆ ಮಾಡಲಾಗುತ್ತದೆ.