ಲಖ್ನೋ: ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ದೀಪಾವಳಿ ಅಂಗವಾಗಿ ನಡೆಸಿದ ದೀಪೋತ್ಸವದಲ್ಲಿ 12 ಲಕ್ಷ ದೀಪಗಳನ್ನು ಬೆಳಗಲಾಗಿದೆ.
12 ಲಕ್ಷ ದೀಪಗಳು ಬೆಳಗಿ ಅಯೋಧ್ಯೆ ನಗರಿ ದೀಪದ ಬೆಳಕಲ್ಲಿ ಕಂಗೊಳಿಸಿದೆ. ಸರಯೂ ನದಿ ತಟದಲ್ಲಿ ನಡೆದ ದೀಪೋತ್ಸವದಲ್ಲಿ 12 ಲಕ್ಷ ದೀಪಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿದೆ.
ಕಳೆದ ವರ್ಷದ ದೀಪೋತ್ಸವದಲ್ಲಿ 6 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ದೀಪಾವಳಿ ಆಚರಿಸಿ ವಿಶ್ವದಾಖಲೆ ನಿರ್ಮಿಸಲಾಗಿತ್ತು. ಈ ಬಾರಿಯೂ ಸರಯೂ ನದಿಯ ದಡದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವುದರೊಂದಿಗೆ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆ ಪ್ರಾರಂಭವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವದಲ್ಲಿ ಭಾಗಿಯಾಗಿದ್ದಾರೆ. ಆಕಾಶದಲ್ಲಿ ರಾಮಾಯಣ ದೃಶ್ಯಗಳನ್ನು ಪ್ರದರ್ಶಿಸುವ 500 ಡ್ರೋನ್ಗಳ ವಿಶೇಷ ಪ್ರದರ್ಶನ ಕೂಡ ನಡೆಯಲಿದೆ.