ಭಾರತದಲ್ಲಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸುವುದು ವಾಡಿಕೆ.
ಈಗ ಜಾಗತಿಕ ಹಣಕಾಸು ವ್ಯವಸ್ಥೆಯು ವಿಸ್ತಾರಗೊಳ್ಳುತ್ತಿದೆ. ಹೂಡಿಕೆದಾರರು ಹೆಚ್ಚು ಜಾಣರಾಗ್ತಿದ್ದಾರೆ. ಅನೇಕ ಭಾರತೀಯರು, ಕ್ರಿಪ್ಟೋಕರೆನ್ಸಿಗಳಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡಲು ಮುಂದಾಗ್ತಿದ್ದಾರೆ.
ಸೆಕೆಂಡ್ ಹ್ಯಾಂಡ್ ಹೋಂಡಾ ಆಕ್ಟಿವಾ ಖರೀದಿ ಮೊದಲು ಇದು ತಿಳಿದಿರಿ
ಕ್ರಿಪ್ಟೋಕರೆನ್ಸಿಗಳು, ಹಣದುಬ್ಬರ ಮತ್ತು ನೋಟಿನ ವಿರುದ್ಧ ಉತ್ತಮ ಹೆಜ್ಜೆಯಾಗಿದೆ. ಕ್ರಿಪ್ಟೋದಲ್ಲಿ ಹೂಡಿಕೆ ಪ್ರಾರಂಭಿಸುವ ಬಳಕೆದಾರರಿಗೆ ಹಲವಾರು ಪ್ಲಾಟ್‌ಫಾರ್ಮ್‌ಗಳು ಪ್ರೋತ್ಸಾಹವನ್ನು ನೀಡುತ್ತಿವೆ.
ಬಿಟ್‌ಕಾಯಿನ್, ಹೊಸ ಸಾರ್ವಕಾಲಿಕ ಏರಿಕೆಯನ್ನು ಕಾಣಲು ಯಶಸ್ವಿಯಾಗಿದೆ. ತಾಳ್ಮೆಯು ಫಲ ನೀಡುತ್ತದೆ ಎಂಬ ಸತ್ಯವನ್ನು ಇದು ಸಾಬೀತುಪಡಿಸುತ್ತಿದೆ. ಬಿಸಿಟಿ ಹೊರತುಪಡಿಸಿ, ಇನ್ನೂ ಕಡಿಮೆ ಮೌಲ್ಯದ ಆಲ್ಟ್ ಕಾಯಿನ್‌ಗಳಿವೆ. ಪೋಲ್ಕಾಡೋಟ್‌ನಂತಹ ಕೆಲವು ಆಲ್ಟ್ ಕಾಯಿನ್‌ಗಳಲ್ಲಿ ಹೂಡಿಕೆ ಮಾಡಲು ಹಬ್ಬದ ಋತು ಸೂಕ್ತ ಸಮಯವಾಗಿದೆ.
ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ
ಕೆಲವು ಉನ್ನತ ಕ್ರಿಪ್ಟೋಕರೆನ್ಸಿಗಳನ್ನು ಆರಿಸಿ, ಅದ್ರಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಸರಿಯಾದ ಗಿಫ್ಟ್ ಆಯ್ಕೆ ಮಾಡುವುದು ಅನೇಕರಿಗೆ ತಲೆನೋವಿನ ಕೆಲಸ. ಕ್ರಿಪ್ಟೋಕರೆನ್ಸಿಗಳನ್ನು ಉಡುಗೊರೆಯಾಗಿ ನೀಡುವುದು ದಿ ಬೆಸ್ಟ್ ಆಯ್ಕೆ. ಈ ಉಡುಗೊರೆ ಮೌಲ್ಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಉಡುಗೊರೆಗಳಲ್ಲಿ ಒಂದಾಗಿದೆ.