ಸೀಬೆ ಹಣ್ಣು ವಿಟಮಿನ್ ಗಳ ಆಗರ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಪೇರಳೆಯ ಚಿಗುರು ಬಹುಪಯೋಗಿ ಎಂಬುದು ನಿಮಗೆ ಗೊತ್ತೇ? ಸೀಬೆಯ ಎಲೆಗೆ ಎರಡು ಕಾಳು ಜೀರಿಗೆ ಬೆರೆಸಿ ಜಗಿಯುವುದರಿಂದ ಬಾಯಿ ಹುಣ್ಣು ದೂರವಾಗುತ್ತದೆ.
ಸೀಬೆಯ ಚಿಗುರಿಗೆ ತೆಂಗಿನ ತುರಿ, ಉಪ್ಪು ಎರಡು ಕಾಳು ಜೀರಿಗೆ ಸೇರಿಸಿ ರುಬ್ಬಿ, ಮಜ್ಜಿಗೆ ಬೆರೆಸಿದರೆ ರುಚಿಕರ ತಂಬುಳಿ ಸಿದ್ಧವಾಗುತ್ತದೆ. ಇದು ಉಷ್ಣ, ಪಿತ್ತ ಸೇರಿದಂತೆ ಹಲವು ರೋಗಗಳಿಗೆ ದಿವ್ಯೌಷಧಿ.
ಸೀಬೆಯ ಎಲೆಗಳನ್ನು ನುಣ್ಣಗೆ ಅರೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ದೂರವಾಗುತ್ತವೆ.
ಶ್ರೀಗಂಧದೊಂದಿಗೆ ಸೀಬೆ ಎಲೆಗಳನ್ನು ತೇದು ಹಚ್ಚಿದರೆ ಕಜ್ಜಿ, ತುರಿ, ಹುಳಕಡ್ಡಿಗಳು ಮಾಯವಾಗಿ ಹೋಗುವುದು. ಇದೇ ಲೇಪನವನ್ನು ತಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಹೇನುಗಳು ಸಾಯುವುವು.