ಕಲಬುರಗಿ: 543 ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 18 ದಿನಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪುಣೆಯಲ್ಲಿ ದಿವ್ಯ ಹಾಗರಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪುಣೆಯಿಂದ ಅವರನ್ನು ಸಿಐಡಿ ಪೊಲೀಸರು ಕಲಬುರ್ಗಿಗೆ ಕರೆತರುತ್ತಿದ್ದು, ಬೆಳಗ್ಗೆ 10 ಗಂಟೆಗೆ ಕಲಬುರ್ಗಿ ತಲುಪಲಿದ್ದಾರೆ. ದಿವ್ಯ ಹಾಗಾಗಿ ಅವರ ಶಾಲೆಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದಿದ್ದು, ಅಕ್ರಮ ನಡೆಸಲಾಗಿತ್ತು.