ಮಂಗಳೂರು: ವಿಚ್ಛೇದನ ನೀಡಲು ನಿರಾಕರಿಸಿದ ಪತಿ ಮೇಲೆ ಪತ್ನಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಕುಲಶೇಖರ ಬಳಿ ನಡೆದಿದೆ.
ಆಂಟೋನಿ ಡಿಸೋಜ ಹಲ್ಲೆಗೆ ಒಳಗಾದವರು. ಜನವರಿ 13ರಂದು ರಾತ್ರಿಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುವ ವೇಳೆ ಅವರ ಪತ್ನಿ ಮತ್ತು ರಾಜೇಶ್ ಎಂಬಾತ ಸ್ಕೂಟರ್ ನಲ್ಲಿ ಬಂದಿದ್ದಾರೆ. ವಿಚ್ಛೇದನ ನೀಡುವಂತೆ ಪತ್ನಿ ಒತ್ತಾಯಿಸಿದ್ದು, ಇದಕ್ಕೆ ನಿರಾಕರಿಸಿದಾಗ ಸಿಟ್ಟಿಗೆದ್ದ ಪತ್ನಿ ಕೆನ್ನೆಗೆ ಕೈಯಿಂದ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಆಕೆಯ ಜೊತೆಗಿದ್ದ ರಾಜೇಶ್ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ವಿಚ್ಛೇದನ ನೀಡದಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ.